ನವೆಂಬರ್‌ನಲ್ಲಿ ಹಂಪಿ ಉತ್ಸವ ಆಚರಿಸಬೇಕೆಂದು ಆಗ್ರಹಿಸಿ ಜನಸೈನ್ಯ ಸಂಘಟನೆ ಬುಧವಾರ ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥಗೆ ಮನವಿ ಸಲ್ಲಿಸಿತು. 
ಜಿಲ್ಲೆ

ನವೆಂಬರ್‌ನಲ್ಲೇ ಹಂಪಿ ಉತ್ಸವ ಆಯೋಜಿಸಲು ಜನಸೈನ್ಯ ಸಂಘಟನೆ ಮನವಿ

ಬಳ್ಳಾರಿ: ಹಂಪಿ ಉತ್ಸವ ನವೆಂಬರ್ 3,4 ಹಾಗೂ 5ರಂದು ಆಚರಿಸಬೇಕೆಂದು ಆಗ್ರಹಿಸಿ ಜನಸೈನ್ಯ ಸಂಘಟನೆ ಬುಧವಾರ ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥಗೆ ಮನವಿ ಸಲ್ಲಿಸಿತು. ಹಂಪಿ ಉತ್ಸವ ಆಯೋಜನೆಗೆ ಸಂಬಂಧಿಸಿ ಜಿಲ್ಲಾಡಳಿತದಿಂದ ಇದುವರೆಗೆ ಪೂರ್ವಭಾವಿ ಸಭೆ ಆಯೋಜಿಸಿಲ್ಲ. ಕರೊನಾ ಕಾರಣಕ್ಕೆ ಹಂಪಿ ಉತ್ಸವ ಮುಂದೂಡಬಾರದು. ಮೈಸೂರು ದಸರಾ ಮಾದರಿಯಲ್ಲೇ ಹಂಪಿ ಉತ್ಸವ ಆಯೋಜನೆಗೂ ಸರ್ಕಾರ ಮುಂದಾಗಬೇಕು. ಈ ಕುರಿತು ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಬೇಕು. ಐತಿಹಾಸಿಕ ಹಾಗೂ ಸಾಂಸ್ಕೃತಿಕ ಉತ್ಸವಗಳ ಆಯೋಜನೆಗೆ ಅಸಡ್ಡೆ ತೋರುವುದು ಸರಿಯಲ್ಲ. ಹಂಪಿ ಉತ್ಸವ ಆಚರಿಸದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಲಾಯಿತು.

ಅಧ್ಯಕ್ಷ ಕೆ.ಎರ‌್ರಿಸ್ವಾಮಿ, ಉಪಾಧ್ಯಕ್ಷ ಬಿ.ಹೊನ್ನೂರಪ್ಪ, ಪದಾಧಿಕಾರಿಗಳಾದ ಫಯಾಜ್ ಬಾಷಾ, ಕೆ.ಹೊನ್ನೂರುಸ್ವಾಮಿ, ಲಕ್ಷ್ಮಿನಾರಾಯಣ ಶೆಟ್ಟಿ, ನಾಸೀರ್ ಶೇಖ್, ಗುರುರಾಜ, ಕೆ.ಮುರಳಿ, ರಾಧಾಕೃಷ್ಣ, ಲೋಕೇಶ್ ಯಾದವ್, ಅರುಣ್‌ಕುಮಾರ್ ಇತರರಿದ್ದರು.