ಜಿಲ್ಲೆ

ನೋಟು ಎನಿಸಿಕೊಂಡವ ನೆಪದಲ್ಲಿ 28 ಸಾವಿರ ರೂ. ದೋಚಿದ ಅಪರಿಚಿತ

Haveri - Kariyappa Aralikatti

ಹಿರೇಕೆರೂರ: ನೋಟು ಎನಿಸಿಕೊಡುವ ನೆಪದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ರೈತನಿಂದ 28 ಸಾವಿರ ರೂ. ದೋಚಿದ ಘಟನೆ ತಾಲೂಕಿನ ಚಿಕ್ಕೇರೂರ ಗ್ರಾಮದಲ್ಲಿ ಸಂಭವಿಸಿದೆ.
ತಾಲೂಕಿನ ಜಾವಳ್ಳಿ ಗ್ರಾಮದ ಮಂಜುನಾಥ ಪ್ರಸಾದ್ವಿ (25) ಮೋಸ ಹೋದ ರೈತ.
ಈತ ಗ್ರಾಮದ ಬ್ಯಾಂಕ್‌ವೊಂದರಲ್ಲಿ ಆಕಳು ಖರೀದಿಸಲು 1 ಲಕ್ಷ ರೂ. ಸಾಲ ಪಡೆದುಕೊಂಡು ಹಣ ಡ್ರಾ ಮಾಡಿಕೊಂಡು ಎನಿಸುತ್ತಿದ್ದಾಗ ಪಕ್ಕದಲ್ಲಿ ನಿಂತಿದ್ದ ಅಪರಿಚಿತ ವ್ಯಕ್ತಿಯೊಬ್ಬ ಸರಿಯಾಗಿ ಎನಿಸಿಕೊ ಇಲ್ಲವಾದರೆ ಹರಿದ ನೋಟುಗಳು ಬರುತ್ತವೆ. ಬೇಕಾದರೆ ನಾನು ಎನಿಸಿಕೊಡುತ್ತೇನೆ ಕೊಡು ಎಂದು ಹಣ ತೆಗೆದುಕೊಂಡಿದ್ದಾನೆ. ಆದರೆ, ಆತ ಎನಿಸಿ ರೈತನ ಕೈಗೆ ವಾಪಸ್ ಕೊಟ್ಟಾಗ ಅದರಲ್ಲಿ 28 ಸಾವಿರ ರೂ. ಕಡಿಮೆ ಬಂದಿದೆ. ಮೋಸ ಹೋದ ರೈತ ಹಂಸಬಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ.