ವಿಜಯವಾಣಿ ಸುದ್ದಿಜಾಲ ಧಾರವಾಡ
ಲೋಕಸಭೆ ಚುನಾವಣೆಗೆ ಸಂಬಂಧಿಸಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುವ ಮತಗಟ್ಟೆ ಸಿಬ್ಬಂದಿಗೆ ಮೇ 1ರಂದು ಆಯಾ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ತರಬೇತಿ ಕೇಂದ್ರಗಳಲ್ಲಿ 2ನೇ ಹಂತದ ಚುನಾವಣಾ ತರಬೇತಿ ಆಯೋಜಿಸಲಾಗಿದೆ. ಸಿಬ್ಬಂದಿ ನಿಗದಿತ ಸಮಯಕ್ಕೆ ಹಾಜರಾಗಿ ಅಗತ್ಯ ತರಬೇತಿ ಪಡೆಯಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮತಗಟ್ಟೆ ಸಿಬ್ಬಂದಿಗೆ ನವಲಗುಂದ ಕ್ಷೇತ್ರದಲ್ಲಿ ಶಂಕರ ಕಲಾ ಮತ್ತು ವಾಣಿಜ್ಯ ಕಾಲೇಜು, ಕುಂದಗೋಳ ಹರಭಟ್ಟ ಪದವಿ ಪೂರ್ವ ಕಾಲೇಜು, ಧಾರವಾಡದ ಬಾಶಲ್ ಮಿಶನ್ ಆಂಗ್ಲ ಮಾಧ್ಯಮ ಶಾಲೆ, ಹು&-ಧಾ ಪೂರ್ವ ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣ , ಹು&-ಧಾ ಕೇಂದ್ರ ಲ್ಯಾಮಿಂಗ್ಟನ್ ಹೈಸ್ಕೂಲ್, ಹು&-ಧಾ ಪಶ್ಚಿಮದಲ್ಲಿ ಧಾರವಾಡ ಆರ್.ಎಲ್. ಎಸ್ ಸಂಯುಕ್ತ ಪದವಿ ಪೂರ್ವ ಕಾಲೇಜು ಮತ್ತು -ಕಲಘಟಗಿ ತಹಸೀಲ್ದಾರ ಕಚೇರಿಯಿಂದ ಬಸ್ ಹೊರಡಲಿವೆ.
ಮೇ 1ರಂದು ಆಯಾ ವಿಧಾನಸಭಾ ಕ್ಷೇತ್ರದಿಂದ ಆಯಾ ಚುನಾವಣಾ ತರಬೇತಿ ಕೇಂದ್ರಕ್ಕೆ ಮತಗಟ್ಟೆ ಸಿಬ್ಬಂದಿ ತರಬೇತಿಗೆ ಸರಿಯಾದ ಸಮಯಕ್ಕೆ ಹಾಜರಿರುವ ಹಿತದೃಷ್ಟಿಯಿಂದ ಸಾರಿಗೆ ವ್ಯವಸ್ಥೆ ಕಲ್ಪಿಸಿಲಾಗಿದೆ. ಬೆಳಗ್ಗೆ 6.-30ಕ್ಕೆ ಬಸ್ಗಳು ಹೊರಡಲಿವೆ. ಕರ್ತವ್ಯಕ್ಕೆ ಆದೇಶ ಪಡೆದ ಎಲ್ಲರೂ ಈ ಸೌಲಭ್ಯ ಪಡೆದು ತಪ್ಪದೇ ನಿಗದಿತ ಸಮಯಕ್ಕೆ ತರಬೇತಿಗೆ ಹಾಜರಾಗಬೇಕು ಎಂದು ಚುನಾವಣಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.