ಮಂಡ್ಯ: ಜಿಲ್ಲಾ ಗ್ರಾಹಕರ ಆಯೋಗದಲ್ಲಿ ದಾಖಲಾಗಿರುವ ಗ್ರಾಹಕರ ದೂರಿಗೆ ಸಂಬಂಧಪಟ್ಟಂತೆ 2014ರ ಸೆಪ್ಟೆಂಬರ್‌ನಿಂದ 2019ರ ಆಗಸ್ಟ್‌ವರೆಗಿನ ಅವಧಿಯಲ್ಲಿ ಇತ್ಯರ್ಥಗೊಂಡ ದೂರು ಹಾಗೂ ಅಮಲ್ಜಾರಿ ಪ್ರಕರಣದಲ್ಲಿ ಯಾವುದೇ ಮೇಲ್ಮನವಿ, ರಿಟ್, ಪುನರ್ ಪರಿಶೀಲನಾ ಅರ್ಜಿ ಹಾಗೂ ತಡೆಯಾಜ್ಞೆ ಬಾಕಿ ಇಲ್ಲದೇ ಇರುವಂತಹ 5 ವರ್ಷ ಅವಧಿ ಮೀರಿರುವ ಕಡತವನ್ನು ರಾಜ್ಯ ಗ್ರಾಹಕರ ಆಯೋಗದ ನಿರ್ದೇಶನದನ್ವಯ ನಾಶಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಪ್ರಕರಣದ ಪಕ್ಷಗಾರರು ಅಥವಾ ವಕೀಲರು ಮೂಲ ದಾಖಲೆ ಮತ್ತು ಇನ್ನಿತರೆ ಆದೇಶದ ದಾಖಲೆಗಳನ್ನು ಸೆ.30 ರೊಳಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕಚೇರಿಗೆ ಅರ್ಜಿ ಸಲ್ಲಿಸಬಹುದು. ನಿಗದಿಪಡಿಸಿರುವ ಅವಧಿಯ ನಂತರ ಕಡತಗಳನ್ನು ನಿಯಮಾನುಸಾರ ನಾಶಪಡಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.