ಮಾಗಡಿ: ಬಿಜೆಪಿಯಿಂದ ಸಿದ್ದರಾಮಯ್ಯರ ಅವರನ್ನು ಏನು ಮಾಡಲು ಸಾಧ್ಯವಿಲ್ಲ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ರಾಜ್ಯಪಾಲರ ನಡೆ ವಿರುದ್ದ ಕಿಡಿಕಾರಿದರು.
ಪಟ್ಣದ ಕೆಎಎಸ್ಅರ್ ಟಿಸಿ ಬಸ್ ನಿಲ್ದಾಣದಲ್ಲಿ ನಾಗರೀಕರ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು,
ರಾಜ್ಯಪಾಲರು ಈ ಮಟ್ಟಕ್ಕೆ ಇಳಿಯುತ್ತಾರೆ ಅಂತ ಅಂದುಕೊಂಡಿರಲಿಲ್ಲ.ರಾಜ್ಯ ಕಂಡ ಏಕೈಕ ಅತ್ಯುತ್ತಮ ನಾಯಕ ಸಿದ್ದರಾಮಯ್ಯ.
ಅಧಿಕಾರ ಇದ್ದ ಸಂದರ್ಭದಲ್ಲಿ ಕುಟುಂಬದವರನ್ನ ಅಕ್ಕಪಕ್ಕ ಸೇರಿಸದೇ ಆಡಳಿತ ಮಾಡಿದ್ದಾರೆ.
ಬಿಜೆಪಿ ಅವ್ರು ದ್ವೇಷದ ರಾಜಕೀಯ ಮಾಡ್ತಿದ್ದಾರೆ. ಸಿದ್ದರಾಮಯ್ಯ ಕಾಲದಲ್ಲಿ ಆಗದೇ ಇರೋ ವಿಚಾರವನ್ನ ಅವರ ಹಣೆಗೆ ಕಟ್ಟುವ ಕೆಲಸ ಆಗ್ತಿದೆ.
ಬಿಜೆಪಿಯವ್ರಿಗೆ ಸಿದ್ದರಾಮಯ್ಯನ ಜನಪ್ರಿಯತೆ ಸಹಿಸಲು ಆಗ್ತಿಲ್ಲ. ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ರು ನಮ್ಮ ತಟ್ಟೆಯ ನೊಣದ ಬಗ್ಗೆ ಮಾತನಾಡುತ್ತಾರೆ. ಬಹುಶಃ ಇದರಿಂದ ಅವರಿಗೆ ಯಾವುದೇ ಅನುಕೂಲ ಆಗಲ್ಲ.
ದ್ವೇಷದ ರಾಜಕಾರಣ ಮಾಡಿ ರಾಜ್ಯವನ್ನ ಬಾಂಗ್ಲಾ, ಶ್ರೀಲಂಕಾ ಸ್ಥಿತಿಗೆ ತರುವ ಪ್ರಯತ್ನ ಮಾಡ್ತಿದ್ದಾರೆ.
ರಾಜ್ಯದಲ್ಲಿ ಇಷ್ಟೊಂದು ದ್ವೇಷದ ರಾಜಕಾರಣ ಮಾಡಿರೋ ಉದಾಹರಣೆಯೇ ಇಲ್ಲ. ಇದರಿಂದ ನಮ್ಮ ಸಿದ್ದರಾಮಯ್ಯ ರವರ ಒಂದು ಕೂದಲನ್ನೂ ಬಗ್ಗಿಸಲು ಸಾಧ್ಯವಿಲ್ಲ. ರಾಜ್ಯ ಪಾಲರು ಇದೇ ರೀತಿ ಕ್ರಮ ಕೈಗೊಂಡರೆ ರಾಜ್ಯ ಪಾಲರ ಅಟಾವೋ ಕರ್ನಾಟಕ ಬಚಾವೋ ಹೋರಾಟ ಹಮ್ಮಿಕೊಳ್ಳಲಾಗುವುದು. ವಿನಾಕಾರಣ ರಾಜ್ಯ ಪಾಲರು, ಕೇಂದ್ರ ಸರಕಾರ ಮುಡಾ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಿಲುಕಿಸಲು ಇದರಿಂದ ಅವರಿಗೆ ಯಾವುದೆ ಪ್ರತಿಫಲ ಸಿಗುವುದಿಲ್ಲ ಸಫಲಕೂಡ ಆಗುವುದಿಲ್ಲಬಿಜೆಪಿಗೆ ಕಡೆಗಾಲ ಬಂದಿದೆ
ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಕಿಡಿಕಾರಿದರು.
ಎಚ್.ಡಿ.ಕುಮಾರಸ್ವಾಮಿ ಬಗ್ಗೆ ಲೋಕಾಯುಕ್ತದ ಸಲ್ಲಿಸಿದ ಅರ್ಜಿ ಭಾಕಿ ಇದೆ ಈ ಬಗ್ಗೆ ಅನುಮತಿ ನೀಡದೆ ರಾಜಕೀಯ ಮಾಡುವುದು ಸರಿಯಲ್ಲ ಎಂದು ಲೇವಡಿ ಮಾಡಿದರು.