ಮಕ್ಕಳಿಗೆ ಡಾ. ಶಕೀಲಾ ಸಲಹೆ
ನೋಟ್ಬುಕ್, ರೇನ್ಕೋಟ್ ವಿತರಣೆ
ಹಿಂದಿನ ಕಾಲದಲ್ಲಿ ಶಿಕ್ಷಣ ಸುಲಭವಾಗಿರಲಿಲ್ಲ. ಎಲ್ಲರಿಗೂ ಶಾಲೆಗೆ ಹೋಗಲು ಆಗುತ್ತಿರಲಿಲ್ಲ. ಆದರೆ, ಎರಡು ದಶಕದ ಹಿಂದೆ ಶಿಕ್ಷಣ ಕಡ್ಡಾಯವಾಗಿದ್ದರಿಂದ ಎಲ್ಲರೂ ಸುಶಿಕ್ಷಿತರಾಗುತ್ತಿದ್ದಾರೆ. ಇಂದಿನ ಮಕ್ಕಳಿಕೆ ಕಲಿಕೆಗೆ ಬೇಕಾದ ಎಲ್ಲ ಸೌಲಭ್ಯವೂ ಲಭಿಸುತ್ತಿದ್ದು, ತಪ್ಪದೇ ದಿನವೂ ಶಾಲೆಗೆ ಬರಬೇಕು ಎಂದು ಮಣಿಪಾಲದ ಲಯನ್ಸ್ ಕ್ಲಬ್ ಅಧ್ಯಕ್ಷೆ ಡಾ.ಶಕೀಲಾ ಸಲಹೆ ನೀಡಿದರು.
ಉಡುಪಿಯ ಕಾಡಬೆಟ್ಟುವಿನಲ್ಲಿರುವ ಶತಮಾನೋತ್ಸವದ ಹೊಸ್ತಿಲಲ್ಲಿರುವ ಟಿ.ಎ. ಪೈ ಮಾಡರ್ನ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಣಿಪಾಲದ ಲಯನ್ಸ್ ಕ್ಲಬ್ ವತಿಯಿಂದ ಜೂ.5ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ಬುಕ್, ರೇನ್ಕೋಟ್ ವಿತರಿಸಿ ಮಾತನಾಡಿದರು.
ಮಣಿಪಾಲ ಲಯನ್ಸ್ ಕ್ಲಬ್ನ ಮುಂದಿನ ಅಧ್ಯಕ್ಷ ಡಾ. ನಿಶಾಂತ ಭಟ್, ಖಜಾಂಚಿ ಸುಧಾಕರ ಕಿಣಿ, ಮಾಜಿ ಅಧ್ಯಕ್ಷ ಡಾ. ಗಣೇಶ ಕಿಣಿ, ಆಡಳಿತ ಮಂಡಳಿಯ ಅಧ್ಯಕ್ಷ ಎಚ್.ಆರ್. ಶೆಣೈ, ಶಾಲಾ ಟ್ರಸ್ಟಿಗಳಾದ ಎಂ.ರಮೇಶ ಕಿಣಿ, ರಮೇಶ ರಾವ್, ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ನಾರಾಯಣ ಭಂಡಾರಿ, ಯು.ಕಲ್ಯಾಣಿ ಪೈ, ಮುಖ್ಯ ಶಿಕ್ಷಕಿ ಸುಲೋಚನಾ ಉಪಸ್ಥಿತರಿದ್ದರು.
ಶಾಲೆಯ ಹಳೆಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಮಕ್ಕಳು ಪಾಲ್ಗೊಂಡಿದ್ದರು. ಶಿಕ್ಷಕಿ ಅಮೃತಾ ಕಾರ್ಯಕ್ರಮ ನಿರ್ವಹಿಸಿದರು.