ಸೋಮವಾರಪೇಟೆ: ಬೆಂಗಳೂರಿನ ಪ್ರಣವ್ ಫೌಂಡೇಶನ್ ವತಿಯಿಂದ ತಾಲೂಕಿನ ಶಾಂತಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಗುರುವಾರ ನೋಟ್‌ಬುಕ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಗುರುಪ್ರಸಾದ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಹಲವು ಯೋಜನೆ ರೂಪಿಸಿದೆ. ಈ ಅವಕಾಶವನ್ನು ಪಾಲಕರು ಸದುಪಯೋಗಪಡಿಸಿಕೊಳ್ಳಬೇಕು. ಪ್ರಣವ್ ಫೌಂಡೇಶನ್ ಜನಪರ ಕೆಲಸಗಳು ಶ್ಲಾಘನೀಯ ಎಂದರು.
ಫೌಂಡೇಶನ್‌ನ ಪದಾಧಿಕಾರಿಗಳಾದ ಪ್ರೇಮ್ ಸಾಗರ್, ಸಜನ್ ಮಂದಣ್ಣ, ಕೆ.ಪಿ.ಆಶೀತ್ ಶಾಲೆಯ ಮುಖ್ಯಶಿಕ್ಷಕ ಪರಮೇಶ್, ಸ್ಥಳೀಯರಾದ ಡಿ.ಎಸ್.ಲಿಂಗರಾಜು, ಕೆ.ಎಂ.ಕೃಷ್ಣಕುಮಾರ್, ಮಧುಕುಮಾರ್, ಧರ್ಮಪ್ಪ, ನಿಶಾಂತ್, ಕಿರಣ್ ಕುಮಾರ್ ಇದ್ದರು.