ಅರಸೀಕೆರೆ ಗ್ರಾಮಾಂತರ ತಾಲೂಕಿನ ಕಸಬಾ ಹೋಬಳಿಯ ಜಕ್ಕನಹಳ್ಳಿ ಮತ್ತು ವನಕಮಾರನಹಳ್ಳಿ ಸರ್ಕಾರಿ ಶಾಲೆಗೆ ಗಂಗಾಧರ್ ನಾಯಕ ಉಚಿತವಾಗಿ ನೋಟ್ ಬುಕ್ ವಿತರಣೆ ಮಾಡಿದರು. ಅಯ್ಯಣ್ಣ, ಕಮಲಮ್ಮ, ರಾಜಶೇಖರ್, ಸ್ವಾಮಿ, ಶಶಿ, ಮೋಹನ್, ಇತರರು ಹಾಜರಿದ್ದರು.  
ಜಿಲ್ಲೆ

ಶಾಲೆಗೆ ನೋಟ್‌ಬುಕ್ ವಿತರಣೆ

ಅರಸೀಕೆರೆ ಗ್ರಾಮಾಂತರ: ಬೆಂಗಳೂರಿನ ನಿರ್ಮಾತೃ ಕೆಂಪೇಗೌಡ ಆಧುನಿಕ ಜಗತ್ತಿಗೆ ಮುನ್ನುಡಿ ಬರೆದ ಯುಗಪುರುಷ ಎಂದು ತಾಲೂಕು ಕರವೇ ಉಪಾಧ್ಯಕ್ಷ ಮುದುಡಿ ಗಂಗಾಧರ್ ನಾಯಕ ಹೇಳಿದರು.

ನಾಡಪ್ರಭು ಕೆಂಪೇಗೌಡರ ಜಯಂತಿ ಅಂಗವಾಗಿ ತಾಲೂಕಿನ ಜಕ್ನಳ್ಳಿ ಹಾಗೂ ವನಕಮಾರನಹಳ್ಳಿ ಸರ್ಕಾರಿ ಶಾಲೆ ಮಕ್ಕಳಿಗೆ ಸೋಮವಾರ ನೋಟ್‌ಬುಕ್ ಹಾಗೂ ಲೇಖನ ಪರಿಕರಗಳನ್ನು ವಿತರಿಸಿ ಮಾತನಾಡಿದ ಅವರು, ಕೆಂಪೇಗೌಡರ ದೂರದೃಷ್ಟಿಯ ಪರಿಕಲ್ಪನೆಯಲ್ಲಿ ನಿರ್ಮಾಣಗೊಂಡ ಬೆಂಗಳೂರು ಇಂದು ಕೋಟ್ಯಂತರ ಜನರ ಆಶ್ರಯ ತಾಣವಾಗಿದೆ. ಅಲ್ಲದೆ ಕರುನಾಡಿಗೆ ಬೆಂಗಳೂರು ಕಿರೀಟವಾಗಿದೆ ಎಂದರು.

ಬಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಗಂಡಸಿ ಅಯ್ಯಣ್ಣ ಮಾತನಾಡಿ, ನಮ್ಮ ದೇಶ, ರಾಜ್ಯವನ್ನು ಅನೇಕ ರಾಜ-ಮಹಾರಾಜರು ಆಳಿ ಹೋಗಿದ್ದಾರೆ. ಇವರ ಪೈಕಿ ಕೆಲವರು ಮಾತ್ರ ತಾವು ಮಾಡಿದ ಜನಪರ ಕೆಲಸ ಕಾರ್ಯಗಳಿಂದ ಅಮರರಾಗಿ ಉಳಿದಿದ್ದಾರೆ. ಅಂತಹವರ ಸಾಲಿನಲ್ಲಿ ಕೆಂಪೇಗೌಡರು ಸಹ ಒಬ್ಬರಾಗಿದ್ದು, ಬೆಂಗಳೂರು ಎಂಬ ನಗರವನ್ನು ನಿರ್ಮಿಸಿ ಕೊಡುವ ಮೂಲಕ ಭೂಪಟದಲ್ಲಿ ಬೆಂಗಳೂರು ಜಗತ್ತಿನ ಗಮನ ಸೆಳೆಯುತ್ತಿದೆ ಎಂದರು.

ಕರವೇ ಮಹಿಳಾ ಘಟಕ ಅಧ್ಯಕ್ಷೆ ಕಮಲಮ್ಮ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಶೇಖರ್, ಕೃಷಿ ಪತ್ತಿನ ಸಹಕಾರ ಸಂಘ ನಿರ್ದೇಶಕ ಸ್ವಾಮಿ, ಕರವೇ ಮುಖಂಡರಾದ ಶಶಿ, ಮೋಹನ್ ಸೇರಿದಂತೆ ಮತ್ತು ಇತರರು ಉಪಸ್ಥಿತರಿದ್ದರು.