ಚಾಮರಾಜನಗರ: ಜಿಲ್ಲೆಯಲ್ಲಿರುವ ಕಾಡಂಚಿನ ಗ್ರಾಮದ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಅಗತ್ಯ ಕಲಿಕಾ ಸಾಮಗ್ರಿಗಳನ್ನು ಒದಗಿಸಲಾಗುತ್ತಿದೆ ಎಂದು ಟಚ್ ಇಂಡಿಯಾ ಸಂಸ್ಥೆಯ ಅಧ್ಯಕ್ಷೆ ಸಿಸ್ಟರ್ ಜೋಸ್ನಾ ತಿಳಿಸಿದರು.
ತಾಲೂಕಿನ ಕಾಳಿಕಾಂಭ, ಕುಂಬೇಶ್ವರ ಕಾಲೋನಿ,ಮುಂಟಿಪಾಳ್ಯ ಆಶ್ರಮಶಾಲೆ , ಗಂಗವಾಡಿ, ಹಿತ್ತಲಗುಡ್ಡ ಶಾಲೆಗಳಲ್ಲಿ ಬೆಂಗಳೂರಿನ ಟಚ್ ಇಂಡಿಯಾ ಸಂಸ್ಥೆ ಹಾಗೂ ್ತ ಇಮ್ಯಾನಿವಲ್ ಕ್ರಿಶಿಯನ್ ಪಬ್ಲಿಕ್‌ಶಾಲೆ ಸಹಯೋಗದಲ್ಲಿ ಕಾಡಂಚಿನ ಗ್ರಾಮಗಳ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.
ಸರ್ಕಾರಿ ಶಾಲೆಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡುವ ನೀಡುವ ಉದ್ದೇಶದಿಂದ ಗಡಿಭಾಗದ ಶಾಲೆಗಳನ್ನು ಗುರುತಿಸಿ ನಮ್ಮ ಸಂಸ್ಥೆಯು ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾಗುವ ವ್ಯವಸ್ಥೆಗಳನ್ನು ಮಾಡುತ್ತ ಬಂದಿದ್ದೇವೆ. ಈ ಭಾಗದಲ್ಲಿ ಸರ್ಕಾರಿ ಶಾಲೆಗೆ ಹೆಚ್ಚಾಗಿ ಬಡ ಮಕ್ಕಳು ಬರುತ್ತಾರೆ. ಎಷ್ಟೋ ಮಕ್ಕಳಿಗೆ ಓದುವುದಕ್ಕೆ ಕಣ್ಣಿನ ತೊಂದರೆ ಇರುತ್ತದೆ. ಅಂತಹ ಮಕ್ಕಳನ್ನು ಮೆಡಿಕಲ್ ಕ್ಯಾಂಪ್ ಮೂಲಕ ಗುರುತಿಸಿ ಕನ್ನಡಕವನ್ನು ನೀಡಲಾಗುತ್ತದೆ. ಕ್ರೀಡೆಗಳಲ್ಲಿ ಭಾಗವಹಿಸಲು ತರಬೇತುದಾರರನ್ನು ನೇಮಿಸಿ ಪ್ರತಿಭೆಯನ್ನು ಹೊರತೆಗೆಯುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣವನ್ನು ನೀಡಲು ಉತ್ತಮ ಶಿಕ್ಷಕರು ಇದ್ದಾರೆ. ಅದರೆ ಪ್ರತಿಭಾವಂತ ಮಕ್ಕಳ ಪ್ರತಿಭೆಗಳನ್ನು ಗುರುತಿಸಲು ವಿದ್ಯಾರ್ಥಿಗಳಿಗೆ ಪಠ್ಯ ಚಟುವಟಿಕೆಯ ವಸ್ತುಗಳ ಅವಶ್ಯಕವಿದೆ. ನಮ್ಮ ಸಂಸ್ಥೆಯು ಅಂತಹ ವಿದ್ಯಾರ್ಥಿಗಳಿಗೆ ಪ್ರೊತ್ಸಾಹಿಸುವ ಕೆಲಸವನ್ನು ಮಾಡುತ್ತಿದೆ. ವಿದ್ಯೆಯಿಂದ ವಂಚಿತರಾದ ಮಕ್ಕಳಿಗೆ ಗ್ರಾಮಕ್ಕೆ ತೆರಳಿ ಶಿಕ್ಷಣವನ್ನು ನೀಡುವ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು ಶ್ರಮಿಸಲಿದೆ ಎಂದು ಎಂದರು.
ಈ ವೇಳೆ ಟಚ್ ಇಂಡಿಯಾ ಸಂಸ್ಥೆಯ ಡೇವಿಡ್ ಬೆಟ್ಟಗೇರಿ, ವಕೀಲ ದಲಿತರಾಜು, ಸ್ವಾಮಿ, ಸುರೇಶ್, ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.