ಸತೀಶ್ ಪೂಜಾರಿ ಬಂಧನ ಖಂಡಿಸಿ ಶಿರಾಳಕೊಪ್ಪದಲ್ಲಿ ಹಿಂದು ಜಾಗರಣ ವೇದಿಕೆ ಪ್ರಮುಖರು ಪ್ರತಿಭಟನೆ ನಡೆಸಿದರು. ದೇವರಾಜ್, ಪ್ರದೀಪ್, ಸುನಿಲ್ ಇತರರಿದ್ದರು.  
ಜಿಲ್ಲೆ

ಲಾಠಿ ಏಟಿಗೆ, ಪೊಲೀಸ್ ಕೇಸಿಗೆ ಹೆದರಲ್ಲ

Shivamogga - Desk - Vinayakumar D B

ಶಿರಾಳಕೊಪ್ಪ: ಪ್ರಚೋನದನಾಕಾರಿ ಭಾಷಣ ಮಾಡಿದ ಆರೋಪದ ಮೇಲೆ ಹಿಂದು ಜಾಗರಣ ವೇದಿಕೆ ದಕ್ಷಿಣ ಪ್ರಾಂತ ಸಹ ಸಂಚಾಲಕ ಸತೀಶ್ ಪೂಜಾರಿ ಬಂಧನ ಖಂಡಿಸಿ ವೇದಿಕೆ ಪದಾಧಿಕಾರಿಗಳು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ವೇದಿಕೆ ಜಿಲ್ಲಾ ಸಂಯೋಜಕ ದೇವರಾಜ್ ಅರಳಿಹಳ್ಳಿ ಮಾತನಾಡಿ, ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿಯಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದವರು ಶಾಂತಿದೂತರಾದರು. ಆದರೆ ಹಿಂದು ಸಮಾಜದ ನೈಜ ಘಟನೆ ಬಗ್ಗೆ ಹೇಳಿದವರು ಇಂದು ಅಪರಾಧಿಗಳಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಿಂದು ಜಾಗರಣ ವೇದಿಕೆಗೆ ಸೇವೆ ಸಲ್ಲಿಸಲು ಬಂದಿರುವ ನಾವು ಪ್ರಾಣಕ್ಕೆ, ಏಟಿಗೆ, ಲಾಠಿಗೆ, ಕೇಸಿಗೆ ಹೆದರುವವರಲ್ಲ. ಯಾವುದೇ ವಿಚಾರಣೆ ನಡೆಸದೆ ಏಕಾಏಕಿ ನಮ್ಮ ಪ್ರಮುಖರನ್ನು ಬಂಧಿಸಲಾಗಿದೆ. ವೇದಿಕೆ ಕಾರ್ಯಕರ್ತರು ಇಂತಹ ಕೃತ್ಯಗಳಿಂದ ಹೆದರುವುದಿಲ್ಲ ಎಂದರು.
ಮುಖ್ಯಮಂತ್ರಿಗಳಿಂದ ಹಿಂದು ವಿರೋಧಿ ಕಾರ್ಯ ಪ್ರಾರಂಭವಾಗಿದೆ. ಇದಕ್ಕೆ ಹೇಗೆ ಉತ್ತರ ಕೊಡಬೇಕು ಎಂಬುದು ಗೊತ್ತಿದೆ. ರಾಣಾ ಪ್ರತಾಪಸಿಂಗ್ ಆದಶರ್ವನ್ನಿಟ್ಟುಕೊಂಡು ಮುನ್ನುಗ್ಗುತ್ತಿರುವ ಕಾರ್ಯಕತರ್ರು ನಾವು. ಶಿವಾಜಿಯಂತೆ ದಿಟ್ಟ ಉತ್ತರ ಕೊಡುವವರು ನಾವು ಎಂದು ಹೇಳಿದರು. ಶಿಕಾರಿಪುರದಲ್ಲಿ ಈ ಹಿಂದೆ ಗೋರಕ್ಷಣೆ ಮಾಡಿದ ಕಾರ್ಯಕತರ್ರ ಮೇಲೆ ಪೊಲೀಸರು ಕೇಸ್ ಹಾಕಿದ್ದಾರೆ. ಕೇಸ್ ಹಾಕಿದ ತಕ್ಷಣ ಗೋಮಾತೆಯ ರಕ್ಷಣೆ ಮಾಡುವುದನ್ನು ನಾವು ಬಿಡುವುದಿಲ್ಲ ಎಂದು ಹೇಳಿದರು.
ಪ್ರಮುಖರಾದ ದೇವರಾಜ್, ಪ್ರದೀಪ್, ಸುನಿಲ್ ಇತರರಿದ್ದರು.