ಗೊಳಸಂಗಿ : ಶಾಲಾ& ಕಾಲೇಜುಗಳ ಪ್ರವೇಶ ದ್ವಾರದಲ್ಲಿ "ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ' ಎಂದು ಬರೆಯುವುದು ಸಹಜ. ಆದರೆ ಮಸೂತಿ ಗ್ರಾಮದ ಅನುದಾನಿತ ಸಂಗನಬಸವ ಪ್ರೌಢಶಾಲೆಯ ಪ್ರವೇಶ ದ್ವಾರದಲ್ಲಿ "ಜಾರಿ ಬೀಳುವ ಅಪಾಯ ಇದೆ, ಜೋಪಾನವಾಗಿ ಒಳಗೆ ಬನ್ನಿ' ಎಂದು ಬರೆಯುವ ಅನಿವಾರ್ಯತೆ ಎದುರಾಗಿದೆ.
ಪ್ರವೇಶ ದ್ವಾರದ ಮುಂದೆ ಮಳೆ ನೀರು ಸಂಗ್ರಹವಾಗಿದ್ದು, ಮಕ್ಕಳಿಗೆ ಶಾಲೆಗೆ ಬರಲು ತೊಂದರೆಯಾಗುತ್ತಿದೆ.
1962 ರಲ್ಲಿ ಆರಂಭಗೊಂಡಿರುವ ಸಂಗನಬಸವ ಪ್ರೌಢಶಾಲೆ ಈ ಭಾಗದ ವಿದ್ಯಾರ್ಥಿಗಳ ಪಾಲಿನ ಭಾಗ್ಯದ ಬೆಳಕು ಎಂದೇ ಖ್ಯಾತಿ ಗಳಿಸಿದೆ. ಆದರೆ ಮಳೆಗಾಲ ಬಂತೆಂದರೆ ಸಾಕು. ಇಲ್ಲಿನ ಆವರಣ ಕೆಸರಿನ ಗದ್ದೆಯಂತಾಗುತ್ತದೆೆ. ಅದರಲ್ಲೂ ಜೂನ್ ತಿಂಗಳು ಮಳೆಗಾಲದ ಜತೆಗೆ ಶೆಣಿಕ ವರ್ಷದ ಆರಂಭಿಕ ಹಂತ. ಈ ವೇಳೆ ಶಾಲಾ ಆವರಣಕ್ಕೆ ಮಕ್ಕಳ ಜತೆಗೆ ಬಹುತೇಕ ಪಾಲಕರೂ ಬರುವುದು ಸಹಜ.
ಶೈಣಿಕ ವರ್ಷದ ಆರಂಭದಲ್ಲಿ ಸಂಭ್ರಮದಿಂದ ಶಾಲೆಗೆ ಬರಬೇಕಿದ್ದ ಮಕ್ಕಳು ಸಮಸ್ಯೆಯ ಸುಳಿಯಲ್ಲಿ ಸಿಲುಕುವಂತಾಗದಿರಲೆಂಬುದು ಬಹುತೇಕ ಪಾಲಕರ ಆಶಯ. ಆದರೆ ಇದಕ್ಕೆಲ್ಲ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದ್ದ ಆಡಳಿತ ಮಂಡಳಿ ಮೌನಕ್ಕೆ ಶರಣಾಗಿರುವುದು ವಿದ್ಯಾರ್ಥಿಗಳ ಪಾಲಿಗೆ ಆತಂಕದ ಪ್ರಶ್ನೆಯಾಗಿದೆ.