ಕಲಬುರಗಿ : ಈಶಾನ್ಯ ಪದವೀಧರ ವಿಧಾನ ಪರಿಷತ್ ಚುನಾವಣೆಯಲ್ಲಿ ಚಲಾಯಿಸಿದ ಮತಗಳ ಮತ ಪೆಟ್ಟಿಗೆಗಳನ್ನು ಇಂದು ಬೆಳಗ್ಗೆ ಸ್ಟ್ರಾಂಗ್ ರೂಮನಿಂದ ಪೆಟ್ಟಿಗೆ ಹೊರಕ್ಕೆ ತೆಗೆಯಲಾಯಿತು.
ಚುನಾವಣಾ ಅಧಿಕಾರಿ ಪ್ರಾದೇಶಿಕ ಆಯುಕ್ತರಾದ ಕೃಷ್ಣ ಭಾಜಪೇಯಿ ಹಾಗೂ ಚುನಾವಣೆ ವೀಕ್ಷಕರಾದ ಎಂ ಮಹೇಶ್ವರ ರಾವ ಅವರ ಸಮ್ಮುಖದಲ್ಲಿ ಭದ್ರತಾ ಕೊಠಡಿಯ ಪ್ಲೈವುಡ್ತೆ ತೆರವುಗೊಳಿಸಲಾಯಿತು.
ಮತ ಪೆಟ್ಟಿಗೆಯಲ್ಲಿ ಅಡಗಿರುವ ಭವಿಷ್ಯ ನಿರ್ಧರಿಸುವ ಮತಗಳ ಎಣಿಕೆ ಪ್ರಕ್ರಿಯೆ ಆರಂಭಗೊಂಡಿದೆ. ಸಂಜೆ 5 -30 ಗಂಟೆ ಹೊತ್ತಿಗೆ ಫಲಿತಾಂಶ ಬರುವ ನಿರೀಕ್ಷೆ ಇದೆ.