ಕಂಪ್ಲಿಯ ದೇವಾಂಗ ಕೆಳಗಡೆಪೇಟೆಯ ಹುಳ್ಳಿ ಬಸಪ್ಪ ದೇವಸ್ಥಾನದಲ್ಲಿ ನೋಪಿ ಗೌರಮ್ಮ ದೇವಿಗೆ ವಿಶೇಷ ಅಲಂಕಾರ ಮಾಡಿರುವುದು. 
ಜಿಲ್ಲೆ

ನೋಪಿ ಗೌರಮ್ಮಗೆ ವಿಶೇಷ ಪೂಜೆ

Kopala - Desk - Eraveni

ಕಂಪ್ಲಿ: ಪಟ್ಟಣದ ದೇವಾಂಗ ಕೆಳಗಡೆಪೇಟೆಯ ಹುಳ್ಳಿ ಬಸಪ್ಪ ದೇವಸ್ಥಾನದಲ್ಲಿ ಸೋಮವಾರ ಅಮಾವಾಸ್ಯೆ ನಿಮಿತ್ತ ನೋಪಿ ಗೌರಮ್ಮನ ಪ್ರತಿಮೆ ಸ್ಥಾಪಿಸಲಾಯಿತು.

ಮುತ್ತೈದೆಯರು 21 ಕಟ್ಟುಗಳಿರುವ ಹೊಸ ಬಿದಿರಿನ ಮೊರದಲ್ಲಿ 21 ಸಂಖ್ಯೆಯ ಕರ್ಚಿಕಾಯಿ, ಗಾರಿಗಿ, ಬಾಳೆಹಣ್ಣು, ಒಬ್ಬಟ್ಟು, ಕರಿಗಡಬು, ಸೇಬು , ಇತರ ಹಣ್ಣುಗಳ ನೈವೇದ್ಯ ಇಟ್ಟರು. ತುಂಬೆಹೂವಿನೊಂದಿಗೆ 21ಸಂಖ್ಯೆಯ ಹರಿಷಿಣ ಕೊಂಬು, ಎಲೆ, ಅಡಕೆಯೊಂದಿಗೆ ಹೂವಿನ ಸೂಸುಗ(ಹೂವಿನ ದಂಡೆ), ತೊಟ್ಟಿಲು, ಹಾರ ಅರ್ಪಿಸಿದರು.

ಅರ್ಚಕ ಗದ್ಗಿ ಹೇಮಂತರಾಜ ಮಾತನಾಡಿ, ತಲಾತಲಾಂತರದಿಂದ ನೋಪಿ ಗೌರಮ್ಮ ಕೂಡಿಸಿ ಪೂಜಿಸುವ ಪರಿಪಾಠವಿದ್ದು, ಹರಕೆ ಹೊತ್ತ ದೇವಾಂಗ ಸಮಾಜದ ಬಂಗಿಯವರು, ಗದ್ಗಿಯವರು, ಶೀಲವಂತರು, ವೇಣಿಯವರು, ಯತ್ನಟ್ಟಿಯವರು, ದೂಪದವರು, ವಾಲ್ಮೀಕಿ ಸಮಾಜದವರು ಪೂಜೆ ಸಲ್ಲಿಸಿ ಭಕ್ತಿಯನ್ನು ಸಮರ್ಪಿಸುತ್ತಾರೆ ಎಂದು ತಿಳಿಸಿದರು.

ಪಟ್ಟಣದ ವಿಶ್ವಕರ್ಮ ಸಮಾಜದ ಕಾಳಿಕ ಕಮಠೇಶ್ವರ, ಪೇಟೆ ಬಸವೇಶ್ವರ ದೇವಸ್ಥಾನ, ಕೂಲಿಕಟ್ಟೆ ಬಸವೇಶ್ವರ ಸೇರಿ ಸಂಪ್ರದಾಯವಿರುವ ಗುಂಡದವರು, ಕಲ್ಗುಡಿ ಓಣಿಯ ಮನೆಗಳಲ್ಲೂ ನೋಪಿ ಗೌರಮ್ಮನನ್ನು ಸ್ಥಾಪಿಸಿ ಪೂಜಿಸಿದರು. ಹೀಗೆ ಪೂಜೆ ಸಲ್ಲಿಸಿದರೆ ದೇವಿ ಇಷ್ಟಾರ್ಥ ಕರುಣಿಸುತ್ತಾಳೆಂಬ ನಂಬಿಕೆ ಭಕ್ತರಲ್ಲಿದೆ.