ಕೊಕ್ಕರ್ಣೆ: ಶಿರಿಯಾರ ಕಲ್ಮರ್ಗಿ ಶ್ರೀರಾಮ ಮಂದಿರದಲ್ಲಿ ನೂಲ ಹುಣ್ಣಿಮೆ ಆಚರಣೆ ನಡೆಯಿತು. ಸೌಡ ಅಶ್ವತ್ಥ್ ಭಟ್ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದರು. 550 ಕೋಟಿ ಶ್ರೀರಾಮ ನಾಮ ತಾರಕ ಮಂತ್ರದ ಜಪ ಅಭಿಯಾನ ಜರುಗಿತು. ಸೌಡ ರವೀಂದ್ರ ಭಟ್ ನೇತೃತ್ವದಲ್ಲಿ ಶ್ರೀರಾಮ ಸಪರಿವಾರ ದೇವರಿಗೆ ಪೂಜೆ, ನೂಲ ಹುಣ್ಣಿಮೆ ಪ್ರಯುಕ್ತ ದೇವರಿಗೆ ವಿಶೇಷ ಅಲಂಕಾರ, ಪೂಜೆ, ಭಜನೆ, ಕೀರ್ತನೆ, ಧಾರ್ಮಿಕ ಕಾರ್ಯಕ್ರಮ ನಡೆದವು.
ಗರಿಕೆಮಠ ಮಾನ್ಯ ರಮಾನಾಥ ಕಿಣಿ, ಕಾಜ್ರಳ್ಳಿ ನಿತ್ಯಾನಂದ ಪೈ, ಸಾಹುಕಾರ ದಿನೇಶ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು. ಶ್ರೀರಾಮಾಂಜನೇಯ ಸೇವಾ ಟ್ರಸ್ಟ್ ಕಾರ್ಯದರ್ಶಿ ರವೀಂದ್ರ ಹೆಗ್ಡೆ ಕಾರ್ಯಕ್ರಮ ನಡೆಸಿಕೊಟ್ಟರು. ಟ್ರಸ್ಟ್ ಖಜಾಂಚಿ ಸಾಹುಕಾರ್ ದಾಮೋದರ ನಾಯಕ್ ಕಲ್ಮರ್ಗಿ, ಟ್ರಸ್ಟ್ ಅಧ್ಯಕ್ಷ ನೋಟರಿ ಶಿರಿಯಾರ ಕಲ್ಮರ್ಗಿ ಪ್ರಭಾಕರ ನಾಯಕ್ ಉಪಸ್ಥಿತರಿದ್ದರು.