ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಎಸ್ಡಿಎಂ ವೈದ್ಯಕಿಯ ಕಾಲೇಜಿನ ತುರ್ತು ಚಿಕಿತ್ಸಾ ವಿಭಾಗದಿಂದ ಆಮ್ಲಜನಕ ವಿತರಣಾ ಸಾಧನಗಳು ವಿಷಯದೊಂದಿಗೆ ನಾನ್ ಇನ್ವ್ಸಿವ್ ವೆಂಟಿಲೇಷನ್ ಕುರಿತು ಒಂದು ದಿನದ ಕಾರ್ಯಾಗಾರ ಏರ್ಪಡಿಸಲಾಗಿತ್ತು.
ಎಸ್ಡಿಎಂ ವೈದ್ಯಕಿಯ ಕಾಲೇಜಿನ ಶ್ವಾಸಕೋಶ ವಿಭಾಗದ ಮುಖ್ಯಸ್ಥ ಡಾ. ಸಂಜಯ್, ಹುಬ್ಬಳ್ಳಿಯ ಕರ್ನಾಟಕ ವೈದ್ಯಕಿಯ ವಿಜ್ಞಾನ ಸಂಸ್ಥೆ ಅರವಳಿಕೆ ವಿಭಾಗದ ಮುಖ್ಯಸ್ಥೆ ಡಾ. ಮಾಧುರಿ, ಕೆಎಲ್ಇಯ ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಶ್ರೀನಿವಾಸ ಕುಲಕರ್ಣಿ, ಹುಬ್ಬಳ್ಳಿ ಜೆಜಿಎಂಎಂ ವೈದ್ಯಕಿಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಶ್ರೀಕಾಂತ್ ಹಿರೇಮಠ, ಡಾ. ಉದಯಕುಮಾರ ಜೆ ಖಾಸಗೆ, ಡಾ. ಗುರುಪ್ರಸಾದ್ ಆಂಟಿನ್ ವಿಶೇಷ ಉಪನ್ಯಾಸ ನೀಡಿದರು.
ಉತ್ತರ ಕರ್ನಾಟಕದ ವೈದ್ಯಕಿಯ ಕಾಲೇಜುಗಳಿಂದ 70ಕ್ಕೂ ಹೆಚ್ಚು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.