ಕಂಪ್ಲಿ: ಪಟ್ಟಣದಲ್ಲಿ ಆಂಗ್ಲ ಭಾಷೆ ನಾಮಫಲಕಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿ, ಪುರಸಭೆ ವ್ಯವಸ್ಥಾಪಕ ಪ್ರಶಾಂತ ಚಿತ್ರಗಾರಗೆ ಕರವೇ (ಟಿ.ಎ.ನಾರಾಯಣಗೌಡ ಬಣ) ಪದಾಧಿಕಾರಿಗಳು ಶುಕ್ರವಾರ ಮನವಿ ಸಲ್ಲಿಸಿದರು.
ಇದನ್ನೂ ಓದಿ: ರಾತ್ರೋರಾತ್ರಿ ನಾಮಫಲಕ ಅಳವಡಿಕೆ
ತಾಲೂಕು ಅಧ್ಯಕ್ಷ ಸಿ.ಡಿ.ರಾಜಶೇಖರ ಮಾತನಾಡಿ, ಪಟ್ಟಣದಲ್ಲಿ ಆಂಗ್ಲ ಭಾಷೆ ನಾಮಫಲಕಗಳು ರಾರಾಜಿಸುತ್ತಿವೆ. ಶೇ.60 ಕನ್ನಡ ಭಾಷೆ ಬಳಸಿದ ನಾಮಫಲಕ, ಪ್ಲೆಕ್ಸ್ ಹಾಕಬೇಕೆಂದು ಸರ್ಕಾರ ಸೂಚಿಸಿದೆ. ನಾಮಫಲಕ, ಪ್ಲೆಕ್ಸ್ ಮುದ್ರಣ ಮಾಡುವವರಿಗೆ ಶೇ.60 ಕನ್ನಡ ಬಳಸುವಂತೆ ಸೂಚಿಸಬೇಕು ಎಂದು ಒತ್ತಾಯಿಸಿದರು.
ಅಂಗಡಿಗಳಲ್ಲಿ ಗ್ರಾಹಕರಿಗೆ ಕಡ್ಡಾಯವಾಗಿ ಕನ್ನಡದ ರಸೀದಿ ನೀಡಬೇಕು. 2025ರ ಮೇ 31ರೊಳಗೆ ಕನ್ನಡ ಭಾಷೆ ನಾಮಫಲಕ, ಪ್ಲೆಕ್ಸ್ ಅಳವಡಿಕೆಯಾಗಬೇಕು. ತಪ್ಪಿದಲ್ಲಿ ಕನ್ನಡೇತರ ಭಾಷೆಯ ನಾಮಫಲಕ, ಪ್ಲೆಕ್ಸ್‌ಗಳಿಗೆ ಕಪ್ಪು ಮಸಿ ಬಳಿಯುವ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
ಕ್ಷೇತ್ರಾಧ್ಯಕ್ಷ ಬಳೆ ಮಲ್ಲಿಕಾರ್ಜುನ, ಜಾಲತಾಣ ವಿಭಾಗದ ತಾಲೂಕು ಅಧ್ಯಕ್ಷ ಕಂಬಳಿ ರಾಮಕೃಷ್ಣ, ನಗರ ಅಧ್ಯಕ್ಷ ಜಂಗ ನಾಗರಾಜ, ಪದಾಧಿಕಾರಿಗಳಾದ ರಾಘವೇಂದ್ರ, ಜಿ.ಸುಧಾಕರ, ಹೂಗಾರ ಗಣೇಶ, ಹಕ್ಕಿಪಿಕ್ಕಿ ಗಣೇಶ, ರಾಮಲಿಂಗ, ಎಂ.ಎಸ್.ಮುನ್ನಾ, ಮುದ್ದಾಪುರ ರಾಘವೇಂದ್ರ, ರಮೇಶ ಇತರರಿದ್ದರು.