ಅಳವಂಡಿ ಸಮೀಪದ ಹನಕುಂಟಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಯಿಂದ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮ ನಡೆಯಿತು, ಕೃಷಿ ಮೇಲ್ವಿಚಾರಕ ಅಶೋಕ, ಲಿಂಗರಾಜ, ಎಸ್‌ಪಿ ಜ್ಯೋತಿ, ಜೇನು ಕೃಷಿಕ ಏಳುಕೋಟೇಶ ಇದ್ದರು. 
ಜಿಲ್ಲೆ

ಕೃಷಿಯೇತ್ತರ ಚಟುವಟಿಕೆಯಲ್ಲಿ ಭಾಗಿಯಾಗಿ

Kopala - Desk - Eraveni

ಅಳವಂಡಿ: ರೈತರು ಕೃಷಿಯ ಜತೆಗೆ ಕೃಷಿಯೇತ್ತರ ಚಟುವಟಿಕೆಯಲ್ಲಿ ಪಾಲ್ಗೊಂಡು ಸ್ವಾವಲಂಬಿ ಜೀವನ ನಡೆಸಬೇಕು ಎಂದು ಜೇನು ಕೃಷಿಕ ಏಳುಕೋಟೇಶ ಕೋಮಲಾಪುರ ತಿಳಿಸಿದರು.

ಸಮೀಪದ ಹನಕುಂಟಿ ಗ್ರಾಮದಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ, ಕೃಷಿ ವಿಸ್ತರಣಾ ಕಾರ್ಯಕ್ರಮದಡಿ ನಡೆದ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.

ಜೇನು ಕೃಷಿಯಿಂದ ಆಹಾರ ಮತ್ತು ಆದಾಯ ಸಿಗಲಿದೆ. ಜೇನಿನಿಂದ ವಿವಿಧ ಕಾಯಿಲೆಗಳನ್ನು ಗುಣಪಡಿಸಲು ಸಾಧ್ಯ. ಹೀಗಾಗಿ ಇದರ ಬೇಡಿಕೆ ಹೆಚ್ಚು. ಸರ್ಕಾರ ಜೇನು ಸಾಕಾಣೆಕೆಗೆ ಸಹಾಯಧನವನ್ನು ನೀಡುತ್ತಿದ್ದು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು. ಕೃಷಿ ಮೇಲ್ವಿಚಾರಕ ಅಶೋಕ, ಲಿಂಗರಾಜ, ಎಸ್‌ಪಿ ಜ್ಯೋತಿ ಇದ್ದರು.