ರಾಯಚೂರು ಲೋಕಸಭೆ ಕ್ಷೇತ್ರಕ್ಕೆ ಬಹುಜನ ಪಕ್ಷದ ಅಭ್ಯರ್ಥಿಯಾಗಿ ನರಸಣ್ಣಗೌಡ ಹೊಸಮನಿ ಶುಕ್ರವಾರ ಚುನಾವಣಾಕಾರಿ ಚಂದ್ರಶೇಖರ ನಾಯಕಗೆ ನಾಮಪತ್ರ ಸಲ್ಲಿಸಿದರು. ಪಕ್ಷದ ಪದಾಕಾರಿಗಳಾದ ವೈ.ನರಸಪ್ಪ, ಹನುಮಂತಪ್ಪ, ವೆಂಕನಗೌಡ ಇದ್ದರು. 
ಜಿಲ್ಲೆ

ಆರು ಜನರಿಂದ ನಾಮಪತ್ರ ಸಲ್ಲಿಕೆ

ರಾಚಯ್ಯ ಸ್ವಾಮಿ

ರಾಯಚೂರು: ಲೋಕಸಭೆ ಚುನಾವಣೆಯ ನಾಮಪತ್ರ ಸಲ್ಲಿಕೆಯ ಕೊನೆದಿನವಾದ ಶುಕ್ರವಾರ ರಾಯಚೂರು ಲೋಕಸಭೆ ಕ್ಷೇತ್ರಕ್ಕೆ ಆರು ಜನರಿಂದ ಏಳು ನಾಮಪತ್ರಗಳು ಸಲ್ಲಿಕೆಯಾಗಿದ್ದು, ಇದುವರೆಗೂ ಒಟ್ಟು 11 ಜನರಿಂದ ಒಟ್ಟು 21 ನಾಮಪತ್ರಗಳು ಸಲ್ಲಿಕೆಯಾದಂತಾಗಿದೆ.
ಈಗಾಗಲೇ ನಾಮಪತ್ರ ಸಲ್ಲಿಸಿದ್ದ ಬಿಜೆಪಿಯ ರಾಜಾ ಅಮರೇಶ್ವರ ನಾಯಕ, ಭಾರತೀಯ ಜನ ಸಾಮ್ರಾಟ್ ಪಕ್ಷದ ಶಾಮರಾವ್ ಮೇದಾರ, ಎಸ್‌ಯುಸಿಐನ ರಾಮಲಿಂಗಪ್ಪ, ಪಕ್ಷೇತರ ಅಭ್ಯರ್ಥಿ ಕೆ.ದೇವಣ್ಣ ನಾಯಕ ಶುಕ್ರವಾರ ಪುನಃ ನಾಮಪತ್ರ ಸಲ್ಲಿಕೆ ಮಾಡಿದರು.
ಬಹುಜನ ಸಮಾಜ ಪಕ್ಷದ ನರಸಣ್ಣಗೌಡ ಹೊಸಮನಿ, ಪಕ್ಷೇತರ ಅಭ್ಯರ್ಥಿಯಾಗಿ ಯಲ್ಲಮ್ಮ ಬಸವರಾಜ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ಚುನಾವಣಾಕಾರಿ ಚಂದ್ರಶೇಖರ ನಾಯಕಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರೊಬೇಷನರಿ ಐಎಎಸ್ ಅಕಾರಿ ಸಾಹಿತ್ಯ ಆಲದಕಟ್ಟೆ, ಸಹಾಯಕ ಚುನಾವಣಾಕಾರಿ ಅಶೋಕ ದುಡಗುಂಡಿ ಉಪಸ್ಥಿತರಿದ್ದರು.