ಮುಳ್ಳಯ್ಯ 
ಜಿಲ್ಲೆ

18ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ

ರವಿಕುಮಾರ್ ಪಿ. ಕೆ

ಬೇಲೂರು: ರಾಜ್ಯ ಸರ್ಕಾರಿ ನೌಕರರ ಸಂಘದ 2024-2029 ರವರೆಗಿನ ಅವಧಿಗೆ ತಾಲೂಕು ಪದಾಧಿಕಾರಿಗಳ ಚುನಾವಣೆ ಅ.28ರಂದು ನಡೆಯಲಿದೆ ಎಂದು ಹಳೇಬೀಡು ಪಬ್ಲಿಕ್ ಶಾಲೆ ಉಪ ಪ್ರಾಂಶುಪಾಲ ಹಾಗೂ ತಾಲೂಕು ಚುನಾವಣಾಧಿಕಾರಿ ಮುಳ್ಳಯ್ಯ ತಿಳಿಸಿದ್ದಾರೆ.

ಇದೇ ಅ.9ರಿಂದ 18 ರವರೆಗೆ ಬೆಳಗ್ಗೆ 9ರಿಂದ 4ರವರೆಗೆ ಆಕಾಂಕ್ಷಿಗಳು ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಪದಾಧಿಕಾರಿಗಳ ವಿವಿಧ ಹುದ್ದೆಗೆ ನಾಮಪತ್ರ ಸಲ್ಲಿಸಬಹುದು. ಅ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಅ. 21ರಂದು ನಾಮಪತ್ರ ಹಿಂಪಡೆಯಲು ಕೊನೇ ದಿನವಾಗಿರುತ್ತದೆ. ಅ.28ರಂದು ಬೆಳಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದ್ದು, ಅಂದೇ ಮತ ಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.