ಜಿಲ್ಲೆ

ಮೈಸೂರು ವಿವಿ ಸಿಂಡಿಕೇಟ್‌ಗೆ ಆರು ಜನರ ನಾಮನಿರ್ದೇಶನ

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಆರು ಜನರನ್ನು ನಾಮ ನಿರ್ದೇಶನ ಮಾಡಲಾಗಿದೆ.


ವಿಜಯನಗರದ ಮಹದೇಶು, ಹಂಪಾಪುರ ಹೋಬಳಿಯ ಕ್ಯಾತನಹಳ್ಳಿಯ ಡಿ.ನಾಗರಾಜು, ಮೈಸೂರು ತಾಲೂಕಿನ ಜೆಟ್ಟಿಹುಂಡಿ ಗ್ರಾಮದ ಡಾ.ಸಿ.ಬಸವರಾಜು, ಬನ್ನಿಮಂಟಪದ ಪ್ರೊ.ಶಬ್ಬೀರ್ ಮೊಹಮ್ಮದ್ ಮುಸ್ತಫಾ,

ಶ್ರೀರಾಂಪುರದ ಮಧುವನ ಬಡಾವಣೆಯ ಡಾ.ಜೆ.ಶಿಲ್ಪಾ, ನಂಜನಗೂಡು ತಾಲೂಕಿನ ಹಾರೋಪುರದ ಎಚ್.ಎಸ್.ನಟರಾಜು ನಾಮನಿರ್ದೇಶನಗೊಂಡಿದ್ದು, ಈ ಕುರಿತು ಉನ್ನತ ಶಿಕ್ಷಣ ಇಲಾಖೆ ಗುರುವಾರ ಆದೇಶ ಹೊರಡಿಸಿದೆ.