ಜಿಲ್ಲೆ

ಬೆಂಗಳೂರು ವಿವಿ ಸಿಂಡಿಕೇಟ್‌ಗೆ ರವೀಂದ್ರ ಪೈ ನಾಮನಿರ್ದೇಶನ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಮಿತಿಗೆ ರವೀಂದ್ರ ಪೈ ಅವರನ್ನು ನಾಮನಿರ್ದೇಶನ ಮಾಡಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.

ರಾಜ್ಯಪಾಲರ ಆದೇಶ ಆಧರಿಸಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಅವರು ಅಧಿಸೂಚನೆ ಹೊರಡಿಸಿದ್ದಾರೆ. ರವೀಂದ್ರ ಪೈ ಅವರು ಬಿಎಂಎಸ್ ತಾಂತ್ರಿಕ ಮಹಾವಿದ್ಯಾಲಯದ ಚೇರ್‌ಮನ್ ಹಾಗೂ ಉದ್ಯಮಿ ದಯಾನಂದ ಪೈ ಅವರು ಪುತ್ರರಾಗಿದ್ದಾರೆ.