ಜಿಲ್ಲೆ

ಕವಿವಿ ಸಿಂಡಿಕೇಟ್‌ಗೆ ನಾಮನಿರ್ದೇಶನ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್‌ಗೆ 6 ಸದಸ್ಯರನ್ನು ನಾಮನಿರ್ದೇಶನ ಮಾಡಿ ಸರ್ಕಾರ ಅಽಸೂಚನೆ ಹೊರಡಿಸಿದೆ. ಮಹಿಳಾ ಮೀಸಲಾತಿಯಲ್ಲಿ ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಡಾ. ಎಚ್.ಎಸ್. ಅನುಪಮ, ಪರಿಶಿಷ್ಟ ಜಾತಿ ಕೋಟಾದಡಿ ಧಾರವಾಡದ ಮಹೇಶ ಹುಲೆನ್ನವರ, ಅಲ್ಪಸಂಖ್ಯಾತ ಕೋಟಾದದಲ್ಲಿ ಧಾರವಾಡದ ರಾಬರ್ಟ್ ದದ್ದಾಪುರಿ, ಹಿಂದುಳಿದ ವರ್ಗದಡಿ ಹುಬ್ಬಳ್ಳಿಯ ದೇವೇಂದ್ರಪ್ಪ ಮಾಳಗಿ, ಸಾಮಾನ್ಯ ಕೋಟಾದಡಿ ಅಂಕೋಲಾದ ಶಿವಾನಂದ ವೆಂಕಣ್ಣ ನಾಯಕ್ ಹಾಗೂ ಶ್ಯಾಮ ಮಲ್ಲನಗೌಡರ ಅವರನ್ನು ನಾಮನಿರ್ದೇಶನ ಮಾಡಲಾಗಿದೆ. ಇವರ ಅಽಕಾರವಽ ಮುಂದಿನ 3 ವರ್ಷ ಅಥವಾ ಮುಂದಿನ ಆದೇಶದವರೆಗೆ ಜಾರಿಯಲ್ಲಿರಲಿದೆ.