ಜಿಲ್ಲೆ

ಸರ್ವಪಕ್ಷಗಳ ಸಭೆಯಲ್ಲೇ ನಾಮಪತ್ರ ವಾಪಸ್​ಗೆ ಸಹಿ

ಮೂಡಿಗೆರೆ: ಬಿದರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಬೆಳೆಗಾರರ ಸಂಘ ಹಾಗೂ ವಿವಿಧ ಪಕ್ಷದ ಮುಖಂಡರ ಸಭೆಯಲ್ಲಿ ಗ್ರಾಪಂ ಚುನಾವಣೆ ನಾಮಪತ್ರ ವಾಪಸ್ ಪಡೆಯಲು ಸ್ಪರ್ಧಾಕಾಂಕ್ಷಿಗಳು ಸಾಮೂಹಿಕವಾಗಿ ಒಪ್ಪಿದರು.

ಚುನಾವಣೆ ಮುಖ್ಯವಲ್ಲ. ಬದುಕು ಮುಖ್ಯ. ಕಸ್ತೂರಿ ರಂಗನ್ ವರದಿಯಿಂದ ಬದುಕು ನಾಶವಾಗುತ್ತದೆ. ಬಿದರಹಳ್ಳಿ ಗ್ರಾಪಂನ 10 ಸ್ಥಾನಕ್ಕೆ 28 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಎಲ್ಲರೂ ನಾಮಪತ್ರ ವಾಪಸ್ ಪಡೆದು ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಬೇಕು. ಈಗಲೇ ನಾಮಪತ್ರ ವಾಪಸ್ ಪಡೆಯುವ ಅರ್ಜಿಗೆ ಸಹಿ ಮಾಡಿ ಆಯಾ ಪಕ್ಷದ ಮುಖಂಡರಿಗೆ ನೀಡಬೇಕು. ಡಿ.14ರಂದು ನಾಮಪತ್ರ ಹಿಂಪಡೆಯಬೇಕು ಎಂದು ಎಲ್ಲ ಪಕ್ಷದ ಮುಖಂಡರು ಹಾಗೂ ಗ್ರಾಮಸ್ಥರು ಮನವಿ ಮಾಡಿದರು. ಇದಕ್ಕೆ ಒಪ್ಪಿಗೆ ಸೂಚಿಸಿ ನಾಮಪತ್ರ ಹಿಂಪಡೆಯುವ ಅರ್ಜಿಗೆ ಸಭೆಯಲ್ಲಿಯೇ ಎಲ್ಲ್ಲ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಸಹಿ ಮಾಡಿ ಆಯಾ ಪಕ್ಷದ ಮುಖಂಡರಿಗೆ ನೀಡಿದರು.