ಜಿಲ್ಲೆ

ಅಧಿಕಾರೇತರ ಸದಸ್ಯರಾಗಿ ನಾಮನಿರ್ದೇಶನ

ಎಂ.ರವಿ

ಅರಸೀಕೆರೆ: ತಾಲೂಕು ಮಟ್ಟದ ಆಶ್ರಯ ಸಮಿತಿಗೆ ರಾಜ್ಯ ಸರ್ಕಾರ ನಾಲ್ವರು ಸದಸ್ಯರನ್ನು ಗುರುವಾರ ಅಧಿಕಾರೇತರ ಸದಸ್ಯರಾಗಿ ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಿದೆ.

ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ರೂಪಾ ಗುರುಮೂರ್ತಿ, ಎಂ.ಅಣ್ಣಾದೊರೈ, ಶ್ರೀನಿವಾಸ್ ಪಾಪಣ್ಣಿ ಹಾಗೂ ಅಹ್ಮದ್ ಪಾಷ ಅವರನ್ನು ಅಧಿಕಾರೇತರ ಸದಸ್ಯರಾಗಿ ನಾಮನಿರ್ದೇಶನ ಮಾಡಲಾಗಿದೆ ಎಂದು ವಸತಿ ಇಲಾಖೆ ಅಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.