ಜಿಲ್ಲೆ

ಎಫ್‌ಸಿಐ ನಿರ್ದೇಶಕರಾಗಿ ನೇಮಿಸುವ ಆಸೆ ತೋರಿಸಿ ಕಲಬುರಗಿ ವ್ಯಕ್ತಿಗೆ 5.60 ಲಕ್ಷ ರೂ. ವಂಚನೆ ಮಾಡಿದ ದೆಹಲಿ‌ಯ ಹೆಣ್ಣು ಮಗಳು !

ವಿಜಯವಾಣಿ ಸುದ್ದಿಜಾಲ ಕಲಬುರಗಿ


ಭಾರತೀಯ ಆಹಾರ ನಿಗಮ (ಎಫ್‌ಸಿಐ)ದ ನಿರ್ದೇಶಕರಾಗಿ ನಾಮ ನಿರ್ದೇಶನ ಮಾಡಿಸಲಾಗುವುದು ಎಂದು ನಂಬಿಸಿ ಕಲಬುರಗಿಯ ವ್ಯಕ್ತಿಯೊಬ್ಬರಿಗೆ ೫.೬೦ ಲಕ್ಷ ರೂಗಳನ್ನು ಪಡೆದುಕೊಂಡು ದೆಹಲಿಯ ಮಹಿಳೆಯೊಬ್ಬರು ಮಕ್ಮಲ್ ಟೋಪಿ ಹಾಕಿ ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ನಗರದ ಹಳೆಯ ಜೇವರ್ಗಿ ರಸ್ತೆಯಲ್ಲಿರುವ ಕೆಎಚ್‌ಬಿ ಕಾಲನಿಯ ನಿವಾಸಿಯಾಗಿರುವ ಸಮಾಜ ಸೇವಕ ಗುರುಲಿಂಗಪ್ಪ ಚಂದನ ಎಂಬುವರಿಗೆ ನಂಬಿಸಿ ಹಣ ಪಡೆದುಕೊಂಡು ಮೋಸ ಮಾಡಲಾಗಿದೆ.
ವ್ಯಕ್ತಿಯೊಬ್ಬರಿಂದ ಪರಿಚಯವಾದ  ದೆಹಲಿಯ ಬಿಜಯಲಕ್ಷಿö್ಮÃ ಎಂಬುವರು ಅಲ್ಲಿನ ಸಿಎಸ್‌ಎಫ್‌ಐನಲ್ಲಿ ಕೆಲಸ ಮಾಡುವುದಾಗಿ ಹೇಳಿಕೊಂಡಿದ್ದರು. ಎಫ್‌ಸಿಐ ನಿರ್ದೇಶಕರನ್ನಾಗಿ ನಾಮನಿರ್ದೇಶನ ಮಾಡಿಸಲಾಗುವುದು ಎಂದು ಹೇಳಿದ್ದರು.ಅದಕ್ಕಾಗಿ  ಹಣ ಖರ್ಚಾಗುತ್ತದೆ ಎಂದು ಹೇಳಿ ೨ ಲಕ್ಷ ರೂ. ಒಮ್ಮೆಲೇ ಪಡೆದುಕೊಂಡು, ಬಳಿಕ ತಮ್ಮ ಹಾಗೂ ಮಗಳ ಖಾತೆಗೆ  ಒಟ್ಟು ೫.೬೦  ಲಕ್ಷ ರೂ. ಪಡೆದುಕೊಂಡರು. ದೆಹಲಿಗೆ ಹೋಗಿ ವಿಚಾರಿಸಿದಾಗ ಅವರು ಅಲ್ಲಿ ಕೆಲಸ ಮಾಡುತ್ತಿಲ್ಲ ಎಂಬುದು ಗೊತ್ತಾಗಿದೆ.
ಬಳಿಕ ಹಣ ನೀಡುವಂತೆ ಕೇಳಿದರೂ,ಕೊಡುವುದಾಗಿ ಹೇಳಿ ಇದುವರೆಗೂ ಕೊಡದೆ ನಂಬಿಸಿ ವಂಚನೆ ಮಾಡಿದ್ದಾರೆ ಎಂದು ದೂರಲಾಗಿದೆ.ಈ ಕುರಿತು ಸ್ಟೇಷನ್ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.