ಜಿಲ್ಲೆ

ಆತ್ಮಹತ್ಯೆ ನಿಯಂತ್ರಣ ದಿನಾಚರಣೆ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ರಾಜನಗರ ಸಿಟಿಜನ್ ಶಿಕ್ಷಣ ಸಂಸ್ಥೆಯ ಅಶೋಕ ನರ್ಸಿಂಗ್ ಕಾಲೇಜಿನಲ್ಲಿ ಮಂಗಳವಾರ ವಿಶ್ವ ಆತ್ಮಹತ್ಯೆ ನಿಯಂತ್ರಣ ದಿನ ಆಚರಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಪ್ರೊ. ಎಸ್.ಕೆ. ಆದಪ್ಪನವರ, ಮಾನಸಿಕ ಖಿನ್ನತೆ, ಕೌಟುಂಬಿಕ ತೊಂದರೆ, ಹಣಕಾಸಿನ ಸಮಸ್ಯೆ, ಪ್ರೀತಿ ವೈಫಲ್ಯ, ಪರೀಕ್ಷೆಯಲ್ಲಿ ಫೇಲ್ ಮುಂತಾದ ಚಿಕ್ಕ ಕಾರಣಗಳಿಂದ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಆತ್ಮಹತ್ಯೆ ಮಹಾಪಾಪ. ಇದನ್ನು ಹೇಡಿಗಳು ಮಾಡಿಕೊಳ್ಳುತ್ತಾರೆ ಎಂದು ಹೇಳಿದರು.

ಆತ್ಮಹತ್ಯೆ ಪ್ರಕರಣದ ಸುದ್ದಿಗಳನ್ನು ಮಾಧ್ಯಮಗಳು ವೈಭವೀಕರಿಸಿ ತೋರಿಸುವುದನ್ನು ಕಡಿಮೆ ಮಾಡಬೇಕು. ಆತ್ಮಹತ್ಯೆ ತಡೆಗಟ್ಟುವ ಬಗ್ಗೆ ಜನಜಾಗೃತಿಯ ಮೂಡಿಸಬೇಕು ಎಂದರು.

ಶಾ ಡಿ.ಜೆ. ಛೇಡಾ ಐಟಿಐ ಪ್ರಾಚಾರ್ಯ ಆರ್.ಬಿ. ಸಾಬಣ್ಣವರ, ರತ್ನಪಾಲ ಶೆಟ್ಟಿ ಪಿಯು ಕಾಲೇಜಿನ ಪ್ರಾಚಾರ್ಯ ಲೋಹಿತ ಎಸ್, ಆರ್.ಎನ್. ಕೋಟಿ, ಗುರುಸಿದ್ದಪ್ಪ ಬಡಿಗೇರ, ಹರ್ಷ ಆದಪ್ಪನವರ, ನರ್ಸಿಂಗ್ ಕಾಲೇಜಿನ ಸಿಬ್ಬಂದಿ ಪೂಜಾ ಕಂಬಾರ, ಸ್ನೇಹಾ ಗೋಕಾವಿ ಮುಂತಾದವರು ಹಾಜರಿದ್ದರು.