ಜಿಲ್ಲೆ

ರಾತ್ರಿ ಉರಿಯದ ಬೀದಿ ದೀಪ

Dharwada - Basavaraj Idli

ಹುಬ್ಬಳ್ಳಿ: ರಾತ್ರಿ ಹೊತ್ತು ಬೀದಿ ದೀಪ ಉರಿಯುವುದು ಸಹಜ. ಆದರೆ, ಅದೇ ಬೀದಿ ದೀಪಗಳು ಹಗಲು ಹೊತ್ತು ಉರಿದರೆ ಹೇಗೆ?

ಇಲ್ಲಿಯ ಗೋಕುಲ ರಸ್ತೆಯ ಕೈಗಾರಿಕಾ ವಸಾಹತುಗಳಲ್ಲಿ ಕಳೆದ ಹಲವು ತಿಂಗಳಿಂದ ಬೀದಿ ದೀಪಗಳು ರಾತ್ರಿ ಉರಿಯುತ್ತಿಲ್ಲ. ಇದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಜನರು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಮಹಾನಗರ ಪಾಲಿಕೆಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಪಾಲಿಕೆಯ ಆಯುಕ್ತರು ಸೇರಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಭರವಸೆಯ ಹೊರತಾಗಿ ಏನೂ ಆಗಿಲ್ಲ.

ಹಗಲು ಉರಿಯುವ ದೀಪಗಳು ರಾತ್ರಿ ಬೆಳಕು ನೀಡುವುದಿಲ್ಲ. ಈಗ ನಾಲ್ಕೆದು ದಿನಗಳಿಂದ ಬೀದಿ ದೀಪಗಳು ಬೆಳಕು ನೀಡುತ್ತಿವೆ. ಆದರೆ, ಜನರಿಗೆ ಬೇಕಾದಾಗ ಅಲ್ಲ, ಹಾಗಾಗಿ ಮಹಾನಗರ ಪಾಲಿಕೆಯವರು ಯಾವ ಕಾರಣಕ್ಕಾಗಿ ಹಗಲು ಬೀದಿ ದೀಪ ಉರಿಸುತ್ತಾರೆ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.