ಎಪ್ಪತ್ನಾಲ್ಕನೇ ಗಣರಾಜ್ಯೋತ್ಸವ ಸಂದರ್ಭದಲ್ಲಿ ಭಾರತ ಸರ್ಕಾರ ಪ್ರಕಟಿಸಿದ ಪದ್ಮ ಪ್ರಶಸ್ತಿಗಳಲ್ಲಿ ದೇಶದ ವಿವಿಧ ಭಾಗಗಳ&ನಾನಾ ಕ್ಷೇತ್ರಗಳ 26 ಎಲೆಮರೆ ಸಾಧಕರಿರುವುದು ವಿಶೇಷ. ಇವರೆಲ್ಲ ತಮ್ಮ ವೃತ್ತಿ ಮತ್ತು ಪ್ರವೃತ್ತಿಯನ್ನು ಪ್ರಚಾರದ ಅಪೇೆಯಿಲ್ಲದೆ ನಡೆಸುತ್ತಾ ಸಮಾಜಕ್ಕೆ ಕೊಡುಗೆ ನೀಡಿದ ವಿಶಿಷ್ಟ ವ್ಯಕ್ತಿಗಳಾಗಿದ್ದಾರೆ. ಆ ಪೈಕಿ ಕೆಲವು ಸಾಧಕರ ಪನೋಟವಿದು.
ಬಡವರ ವೈದ್ಯ
ಸಂಸತಿ ರಕ್ಷಕ
ಸಿದ್ದಿ ಮಕ್ಕಳಿಗೆ ಶಿಕ್ಷಣ
ಗುಜರಾತ್ನ ಸಿದ್ದಿ ಬುಡಕಟ್ಟಿನ ಸಾಮಾಜಿಕ ಕಾರ್ಯಕರ್ತೆ, 62 ವರ್ಷದ ಹೀರಾಬಾಯಿ ಲೋಬಿ ಪದ್ಮ ಪ್ರಶಸ್ತಿಗೆ ಭಾಜನರಾದ ಇನ್ನೊಬ್ಬ ಸಾಧಕಿ. ತಾವು ಸ್ಥಾಪಿಸಿದ ಅಂಗನವಾಡಿಗಳ ಮೂಲಕ ಸಿದ್ದಿ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ.
ಸೀರೆಯಲ್ಲಿ ಭಗವದ್ಗೀತೆ
ಬುಡಕಟ್ಟು ಜನರ ಮಿತ್ರ
ಮೋದಿ ಕಾರಣದಿಂದಲೇ ನನಗೆ ಪದ್ಮಭೂಷಣ ಲಭಿಸಿದೆ
ಪದ್ಮಭೂಷಣ ಪುರಸ್ಕಾರ ೂಷಣೆಯಾದ ಹಿನ್ನೆಲೆಯಲ್ಲಿ ಮೈಸೂರಿನ ಕುವೆಂಪುನಗರದ ತಮ್ಮ ಮನೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಗುರುವಾರ ಅಭಿನಂದನೆ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರಶಸ್ತಿ ನೀಡಿದ್ದಾರೆಂಬ ಕಾರಣಕ್ಕೆ ಸರ್ಕಾರವನ್ನು ಹೊಗಳುವುದಿಲ್ಲ. ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ. ಆದರೆ, ರಾಜಕೀಯದ ಬಗ್ಗೆ ಓದಿಕೊಂಡಿದ್ದು, ದೇಶದಲ್ಲಿ ಮೋದಿ ಸರ್ಕಾರದಂತಹ ಸರ್ಕಾರ ಈವರೆಗೆ ಬಂದಿರಲಿಲ್ಲ. ಸೇವೆಯನ್ನೇ ದೃಷ್ಟಿಯಲ್ಲಿಟ್ಟುಕೊಂಡು, ಧೈರ್ಯ ಇರುವಂಥವರು ಇದುವರೆಗೆ ಯಾರೂ ಬಂದಿರಲಿಲ್ಲ ಎಂದು ಹೊಗಳಿದರು.
2024 ಹಾಗೂ 2029ರ ಲೋಕಸಭಾ ಚುನಾವಣೆಯಲ್ಲೂ ನರೇಂದ್ರ ಮೋದಿ ಬಹುಮತದಿಂದ ಗೆಲ್ಲಬೇಕು. ಬಳಿಕವೇ ಚುನಾವಣಾ ರಾಜಕೀಯದಿಂದ ನಿವೃತ್ತರಾಗಬೇಕು. ಈವರೆಗೂ ಅವರಂತೆಯೇ ಇರುವವರನ್ನು ತಯಾರು ಮಾಡಬೇಕು ಎಂದರು. ಏಕರೂಪ ನಾಗರಿಕ ಸಂಹಿತೆಯನ್ನು ಅನುಷ್ಠಾನಕ್ಕೆ ತರಬೇಕು. ಎಲ್ಲ ಕಾನೂನು ಎಲ್ಲರಿಗೂ ಅನ್ವಯವಾಗುವಂತೆ ಮಾಡಬೇಕು. ಮತಕ್ಕಾಗಿ ಒಂದು ವರ್ಗದ ಓಲೈಕೆ ಸರಿಯಲ್ಲ. ಅಲ್ಪಸಂಖ್ಯಾತರು ಬೇರೆ ಎಂದು ಮಾಡಿದ್ದು ಏಕೆ? ಸ್ವಾತಂತ್ರ್ಯ ಬಂದ ನಂತರ ದೇಶಕ್ಕೆ ಸರಿಯಾದ ಬುನಾದಿ ಹಾಕಲಿಲ್ಲ. ಇದರಿಂದ ಹಲವು ಸಮಸ್ಯೆಗಳಾಗಿವೆ ಎಂದು ಹೇಳಿದರು.
ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಅಸಮಾಧಾನ
2002ರ ಗುಜರಾತ್ ಗಲಭೆಯಲ್ಲಿ ನರೇಂದ್ರ ಮೋದಿ ಪಾತ್ರವಿತ್ತು ಎಂದು ಆರೋಪಿಸಿ ಬಿಬಿಸಿ ಹೊರತಂದಿರುವ ಸಾಕ್ಷ್ಯಚಿತ್ರದ ಬಗ್ಗೆ ಭೈರಪ್ಪ ಅಸಮಾಧಾನ ವ್ಯಕ್ತಪಡಿಸಿದರು. ಜಿ20 ಶೃಂಗಸಭೆಗೆ ಉತ್ತಮ ಅರ್ಥಶಾಸರನ್ನು ಆಯ್ಕೆ ಮಾಡಿದ್ದನ್ನು ಸಹಿಸಲಾಗದೇ ಇಂಥದ್ದೆಲ್ಲ ಶುರು ಮಾಡಿದ್ದಾರೆ. ಬಹಳ ಹಳೆಯ ವಿಷಯವನ್ನು ಈಗ ತೆಗೆದಿದ್ದಾರೆ ಎಂದು ಕಿಡಿಕಾರಿದರು. ಈಗ ದೇಶ ಬಹಳ ಅಭಿವೃದ್ಧಿ ಕಂಡಿದೆ. ಅಂತೆಯೇ ಸವಾಲುಗಳೂ ಇವೆ. ವಿದೇಶದಲ್ಲಿ ಸೋತವರು ಗೆದ್ದವರನ್ನು ಅಭಿನಂದಿಸುತ್ತಾರೆ. ಆದರೆ, ನಮ್ಮಲ್ಲಿ ಆ ರೀತಿ ಇಲ್ಲ. ಪ್ರತಿಪಕ್ಷದಲ್ಲಿರುವವರು ಜವಾಬ್ದಾರಿ ಏನೆಂದು ತಿಳಿಯದೇ ಸದಾ ಬೈಗುಳದಲ್ಲಿ ತೊಡಗುತ್ತಿದ್ದಾರೆ. ಅಧ್ಯಯನ ಮಾಡಿ, ಅಂಕಿ&ಅಂಶಗಳನ್ನು ಇಟ್ಟುಕೊಂಡು ಸರ್ಕಾರ ಯಾವ್ಯಾವುದನ್ನು ಮಾಡಿಲ್ಲ ಎಂದು ತಿಳಿಸಬೇಕು. ಆಗ, ಉತ್ತಮ ಪ್ರಜಾಪ್ರಭುತ್ವ ಸಾಧ್ಯವಾಗುತ್ತದೆ ಎಂದರು.
ಕೃತಿ ಕಾಲದ ಪರೀಕ್ಷೆಯಲ್ಲಿ ಗೆಲ್ಲಬೇಕು
ಪದ್ಮಭೂಷಣ ಪುರಸ್ಕಾರ ಸಿಕ್ಕಿದ್ದಕ್ಕಿಂತಲೂ, ನನ್ನ ಪುಸ್ತಕಗಳನ್ನು ಲಾಂತರ ಜನರು ಓದಿ ಸಂತೋಷಪಟ್ಟಿರುವುದು ಹೆಚ್ಚಿನ ಆನಂದ ನೀಡಿದೆ. ನನಗೀಗ 92 ವರ್ಷ. ನಾನು ಸತ್ತ ಮೇಲೂ ನನ್ನ ಪುಸ್ತಕಗಳು ಬದುಕುತ್ತವೆಯೇ ಎನ್ನುವುದು ಮುಖ್ಯವಾಗುತ್ತದೆ. ಅದುವೇ ನಿಜವಾದ ಪ್ರಶಸ್ತಿ. ಕುಮಾರವ್ಯಾಸ 500 ವರ್ಷ ಹಿಂದಿನವನು. ಈಗಲೂ ಆತನ ಕೃತಿಯನ್ನು ಓದುತ್ತಾರೆ. ಆ ಬರವಣಿಗೆಯಲ್ಲಿ ಅಂತಹ ಶಕ್ತಿ ಇದೆ. ನನ್ನ ಸಾಹಿತ್ಯದಲ್ಲೂ ಆ ಶಕ್ತಿ ಇದೆಯೇ ಎನ್ನುವುದನ್ನು ಆಲೋಚಿಸಬೇಕು. ನಾನು ಈವರೆಗೂ ಆಲೋಚಿಸುತ್ತಿರುವುದು ಇದನ್ನೇ ಎಂದರು.
ಕಲೆ ಪ್ರೀತಿಸುವ ಮನೋಭಾವ ಅಗತ್ಯ
ಚಿಕ್ಕಬಳ್ಳಾಪುರ: ಸರ್.ಎಂ.ವಿಶ್ವೇಶ್ವರಯ್ಯ ಮತ್ತು ಸಿಎನ್ಆರ್ ರಾವ್ ಅವರ ಮೂಲಕ ಎರಡು ಭಾರತರತ್ನ ಪಡೆದಿರುವ ಚಿಕ್ಕಬಳ್ಳಾಪುರ ಜಿಲ್ಲೆಗೆ, ತಮಟೆ ಮಾಂತ್ರಿಕ ಪಿಂಡಿಪಾಪನಹಳ್ಳಿಯ ಮುನಿವೆಂಕಟಪ್ಪ
* ತಮಟೆ ಕಲೆ ರೂಢಿಸಿಕೊಳ್ಳಲು ಹೇಗೆ ಪೋತ್ಸಾಹ ಸಿಕ್ಕಿತು?
& ಒಮ್ಮೆ ದೇವರಮಳ್ಳೂರಿನಲ್ಲಿ ತಮಟೆ ಬಾರಿಸಿದ್ದನ್ನು ನೋಡಿದ ಜಾನಪದ ಅಕಾಡೆಮಿಯ ನಾಗೇಗೌಡರು, ಎಲ್ಲಿಯೇ ಕಾರ್ಯಕ್ರಮ ನಡೆಸಿದರೂ ಆಹ್ವಾನ ನೀಡುತ್ತೇವೆ, ಅಲ್ಲಿಗೆ ಬಂದು ತಮಟೆ ಬಾರಿಸಬೇಕೆಂಬುದಾಗಿ ಹೇಳಿದರು. ಹಾಗೆಯೇ ಒಳ್ಳೆಯ ಅವಕಾಶಗಳನ್ನು ಕೊಡಿಸಿದರು. ಇದರಿಂದ ದೇಶ&ವಿದೇಶಗಳಲ್ಲಿ ನನ್ನ ಕಲೆ ಪ್ರದರ್ಶಿಸಲು ಸಾಧ್ಯವಾಯಿತು.
* ಕಲಾವಿದರಾಗಿ ಎದುರಿಸಿದ ಸವಾಲುಗಳು?.
& ಮೊದಲು ತಮಟೆ ಬಾರಿಸುವವರನ್ನು ಕಡೆಗಣಿಸಲಾಗುತ್ತಿತ್ತು. ಆದರೂ, ದೇವರ ಜಾತ್ರೆ, ಶವಯಾತ್ರೆಗಾಗಿ ಕರೆಯುತ್ತಿದ್ದರು. ಈಗ ಬದಲಾಗಿದೆ. ಸಂಗೀತದಂತಹ ಕಲಾ ಪ್ರದರ್ಶನ ಕಾರ್ಯಕ್ರಮಗಳಲ್ಲಿ ತಮಟೆ ಕಲೆ ಪ್ರದರ್ಶಿಸುವಷ್ಟರ ಮಟ್ಟಿಗೆ ಬೆಳವಣಿಗೆಯಾಗಿದೆ.
* ತಮಟೆ ಕಲೆಗೆ ಪೋತ್ಸಾಹ ಇದೆಯೇ?
&ಕಲಿಯಲು ಯುವಕರು ಬರುತ್ತಾರೆ. ಕೆಲವರು ಹಣ ಸಿಗುತ್ತದೆ ಎಂಬ ಆಸೆಗೆ ಸೀಮಿತವಾಗುತ್ತಾರೆ. ಕಲೆಯನ್ನು ಪ್ರೀತಿಸುವ, ಬೆಳೆಸುವ ಮನೋಭಾವ ಅಗತ್ಯ. ಇದಕ್ಕೆ ಕಲಾವಿದರಿಗೆ ತರಬೇತಿ, ಪೋತ್ಸಾಹ ಮತ್ತು ನೆರವು ಸಿಗಬೇಕು.
*ಸರ್ಕಾರದಿಂದ ನೆರವಿನ ನಿರೀಕ್ಷೆ ಇದೆಯೇ?
& ಇದೆ. ಆದರೆ, ಯಾರನ್ನು ಕೇಳುವುದು? ರಾಜ್ಯೋತ್ಸವ ಪ್ರಶಸ್ತಿ ಸಂದರ್ಭದಲ್ಲಿ ನಿವೇಶನಕ್ಕಾಗಿ ನಿಯಮಾನುಸಾರ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಲಾಯಿತು. ಬೆಂಗಳೂರಿನ ಕೆಂಪೇಗೌಡ ಬಡಾವಣೆಯಲ್ಲಿ ಮಂಜೂರಾಯಿತು. ಇದೇ ವೇಳೆ 5 ಲಕ್ಷ ರೂಪಾಯಿ ಪಾವತಿಸಬೇಕು ಎಂದು ತಿಳಿಸಿದರು. ಅದಕ್ಕೆ ಸುಮ್ಮನಾದೆ. ಒಂದು ನಿವೇಶನ ಕೊಡಲಿ. ಮಾಸಾಶನ ಹೆಚ್ಚಿಸಲಿ.