ಜಿಲ್ಲೆ

ಮದ್ಯದಂಗಡಿ ತೆರೆಯಲು ಅವಕಾಶ ಬೇಡ

ಪ್ರಸಿನ್ ಕೆ.ಆರ್

ಹಾಸನ: ನಗರದ ರಾಜಾಜಿನಗರದಲ್ಲಿ ನೂತನವಾಗಿ ತೆರೆಯಲು ಉದ್ದೇಶಿಸಿರುವ ಮದ್ಯದಂಗಡಿಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಮಹಿಳೆಯರು ಗುರುವಾರ ಪ್ರತಿಭಟನೆ ನಡೆಸಿದರು.

ಸಾವಿರಾರು ಕುಟುಂಬಗಳು ವಾಸಿಸುತ್ತಿರುವ ಜನ ವಸತಿ ಪ್ರದೇಶದಲ್ಲೇ ಬಾರ್ ತೆರೆಯಲು ಅಬಕಾರಿ ಇಲಾಖೆ ಅನುಮತಿ ನೀಡಿರುವುದು ಸರಿಯಲ್ಲ. ಕೂಡಲೇ ಇದನ್ನು ವಾಪಸ್ ಪಡೆಯಬೇಕು. ಜನರ ವಿರೋಧದ ನಡುವೆಯೂ ಅನುಮತಿ ನೀಡಿರುವುದು ಖಂಡನೀಯ. ಕೂಡಲೇ ಅಧಿಕಾರಿಗಳು ಮರು ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.

ಬಾರ್ ಅನ್ನು ಬೇರೆಡೆಗೆ ಸ್ಥಳಾಂತರ ಮಾಡಬೇಕು. ಸಾರ್ವಜನಿಕರ ವಿರೋಧ ಇದ್ದರೆ ಬಾರ್ ಬೇರೆಡೆಗೆ ಸ್ಥಳಾಂತರಿಸಬೇಕು ಎಂಬ ನಿಯಮ ಪಾಲಿಸಬೇಕು. ಆದರೂ ಅಧಿಕಾರಿಗಳು ಈ ಬಾರ್ ವಿಚಾರದಲ್ಲಿ ಧ್ವಂದ್ವ ನಿಲುವು ತಾಳಿದ್ದಾರೆ ಎಂದು ಮಹಿಳೆಯರು ಆಕ್ರೋಶ ಹೊರ ಹಾಕಿದರು.

ಬಾರ್ ಎದುರೇ ಧರಣಿ ನಡೆಸಿ ಘೋಷಣೆ ಕೂಗಿದ ಮಹಿಳೆಯರು, ಕಟ್ಟಡ ಮಾಲೀಕರು ಹಾಗೂ ಬಾರ್ ನಡೆಸಲು ಲೈಸೆನ್ಸ್ ನೀಡಿರುವ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ವಸತಿ ಪ್ರದೇಶದಲ್ಲಿ ಬಾರ್ ತೆರೆಯಲು ಬಿಡುವುದಿಲ್ಲ, ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದರು.