ಜಿಲ್ಲೆ

ಯಾರೂ ಬಿಜೆಪಿ ಬಿಡುವುದಿಲ್ಲ

ಮಂಜುನಾಥ ಅಂಗಡಿ

ಧಾರವಾಡ: ಬಿಜೆಪಿ ಚಿಹ್ನೆಯಿಂದ ಗೆದ್ದು ಶಾಸಕರಾದವರಾರೂ ಕಾಂಗ್ರೆಸ್ ಸೇರುವುದಿಲ್ಲ. ಸಿದ್ದರಾಮಯ್ಯ ಅವರ ನಾಯಕತ್ವ ಸಾಕಾಗಿ ಕಾಂಗ್ರೆಸ್‌ನ 40ರಿಂದ 50 ಶಾಸಕರು ಬಿಜೆಪಿಗೆ ಬರುತ್ತಾರೆ ಎಂಬ ಮಾಹಿತಿ ಇದೆ ಎಂದು ಮಾಜಿ ಶಾಸಕ ಅಮೃತ ದೇಸಾಯಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನ 135 ಸ್ಥಾನ ಗೆಲ್ಲಿಸಿ ಕಳಿಸಿದ್ದಾರೆ. ಅಽಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಮಾಡಬೇಕಾದ ಕೆಲಸ ಬಿಟ್ಟು ಜನರ ಲಕ್ಷ÷್ಯವನ್ನು ಬೇರೆಡೆ ತಿರುಗಿಸುವ ಕೆಲಸ ಮಾಡುತ್ತಿದೆ. ರೈತರು ಕಷ್ಟ ಅನುಭವಿಸುತ್ತಿದ್ದಾರೆ. ಅದಕ್ಕೆ ಸ್ಪಂದಿಸುವುದನ್ನು ಬಿಟ್ಟು, ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಬರುತ್ತಾರೆ ಎಂದು ಹೊಲಸು ರಾಜಕೀಯ (ಡರ್ಟಿ ಪೊಲಿಟಿಕ್ಸ್) ಮಾಡುತ್ತಿದ್ದಾರೆ. ಕಾಂಗ್ರೆಸ್ ನೀಡಿರುವ ಗ್ಯಾರಂಟಿಗಳೇ ಭೋಗಸ್. ಜುಲೈನಲ್ಲಿ ಗೃಹಿಣಿಯರ ಖಾತೆಗೆ 2,000 ರೂ. ಜಮಾ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಆಗಸ್ಟ್ ಮುಗಿಯುತ್ತ ಬಂದರೂ ಹಣ ಜಮಾ ಮಾಡಿಲ್ಲ. ಜನರಿಗೆ ಸುಳ್ಳು ಹೇಳಿ, ಮೋಸ ಮಾಡಿ ಅಽಕಾರಕ್ಕೆ ಬಂದಿದ್ದಾರೆ ಎಂದರು.