ಮಣೂರು ಪಡುಕರೆ ಪ್ರೌಢಶಾಲೆಯಲ್ಲಿ ನಡೆದ ಶಿಕ್ಷಕ-ರಕ್ಷಕ ಸಭೆಯಲ್ಲಿ ಮುಖ್ಯ ಶಿಕ್ಷಕ ವಿವೇಕಾನಂದ.ವಿ.ಗಾಂವಕಾರ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪ್ರೇರಣ ಮಾತುಗಳನ್ನಾಡಿದರು.  
ಜಿಲ್ಲೆ

ಪರೀಕ್ಷೆ ಒತ್ತಡ ಬೇಡ ಹಬ್ಬವಂತಾಗಬೇಕು

ಇಂದಿರಾ ಎನ್ ಕೆ

ಕೋಟ: ಶೈಕ್ಷಣಿಕ ಚಟುವಟಿಕೆಯ ಅಂತಿಮ ಹಂತ ಸಮೀಪಿಸುತ್ತಿದೆ. ವಿದ್ಯಾರ್ಥಿಗಳ ಪರೀಕ್ಷಾ ತಯಾರಿ ಮತ್ತು ಸಿದ್ಧತೆ ಪ್ರಾರಂಭಗೊಂಡಿದೆ. ಈ ಹಂತದಲ್ಲಿ ವಿದ್ಯಾರ್ಥಿಗಳಲ್ಲಿ ಹಾಗೂ ಪಾಲಕರಲ್ಲಿ ಗೊಂದಲ, ಚಡಿಪಡಿಕೆ ಇದ್ದೆ ಇರುತ್ತೆ. ಅದಕ್ಕಾಗಿ ಪರೀಕ್ಷೆ ಭಯ ಬೇಡ ಹಬ್ಬವಾಗಿ ಆಚರಣೆಯಾಗುವಂತಿರಬೇಕು ಎಂದು ಪಡುಕರೆ ಸಂಯುಕ್ತ ಪ್ರೌಢಶಾಲಾ ಮುಖ್ಯ ಶಿಕ್ಷಕ ವಿವೇಕಾನಂದ ವಿ.ಗಾಂವಕಾರ ಕಿವಿಮಾತು ಹೇಳಿದರು.

ಮಣೂರು ಪಡುಕರೆ ಪ್ರೌಢಶಾಲೆಯಲ್ಲಿ ಶಿಕ್ಷಕ-ರಕ್ಷಕ ಸಭೆಯಲ್ಲಿ ಮಾತನಾಡಿದರು. ಶಿಕ್ಷಕರಾದ ರಾಜೀವ, ಅನುಪಮಾ, ಸುವರ್ಣ ವಿ. ನಾವಡ, ಹರ್ಷಿತಾ, ಪೂರ್ಣಿಮಾವತಿ, ರಜಿನಿ ಮಾಹಿತಿ ವಿನಿಮಯ ಮಾಡಿಕೊಂಡರು. ಎಸ್‌ಡಿಎಂಸಿ ಅಧ್ಯಕ್ಷ ರಾಘವೇಂದ್ರ ಕಾಂಚನ್ ಮತ್ತು ಮೇಲುಸ್ತುವಾರಿ ಸಮಿತಿ ಉಪಸ್ಥಿತರಿದ್ದರು. ಹಿರಿಯ ಸಹ ಶಿಕ್ಷಕರಾದ ರಾಮದಾಸ್ ನಾಯಕ್ ಸ್ವಾಗತಿಸಿದರು. ಶಿಕ್ಷಕಿ ಶೋಭಾ ವಂದಿಸಿದರು. ಶಿಕ್ಷಕ ಹೆರಿಯ ಕಾರ್ಯಕ್ರಮ ನಿರೂಪಿಸಿದರು.