ಜಿಲ್ಲೆ

ಭಿನ್ನಮತ ಶಮನಕ್ಕೆ ಯಾರ ಸಂಧಾನ ಬೇಕಿಲ್ಲ

ಎಸ್.ಎರ್ರಿಸ್ವಾಮಿ

ಬಳ್ಳಾರಿ ; ಮಾಜಿ ಸಚಿವ ಬಿ.ಶ್ರೀರಾಮುಲು ಹಾಗೂ ನನ್ನ ನಡುವಿನ ಭಿನ್ನಮತ ಶಮನಕ್ಕೆ ಯಾರ ಸಂಧಾನ ಹಾಗೂ ಮಧ್ಯಸ್ಥಿಕೆ ಬೇಕಿಲ್ಲ ಎಂದು ಶಾಸಕ ಜಿ.ಜನಾರ್ದನರೆಡ್ಡಿ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಸದ್ಯ ನಮ್ಮ ಸೇಹ್ನದ ಬಗ್ಗೆ ಯಾವ ನಾಯಕರು ಮಾತನಾಡುವುದು ಬೇಡ. ಸಣ್ಣ ವಿಚಾರದ ಘಟನೆಯಿಂದ ಒಬ್ಬರ ಮೇಲಿನ ಪ್ರೀತಿ ಹಾಗೂ ಅಭಿಮಾನ ಬದಲಾವಣೆಯಾಗಲು ಸಾಧ್ಯವಿಲ್ಲ ಎಂದರು.

ನಾನು ಹಾಗೂ ಮಾಜಿ ಸಚಿವ ಬಿ.ಶ್ರೀರಾಮುಲು ಕಳೆದ ಹದಿನೈದು ವರ್ಷದಿಂದ ಸ್ನೇಹಿತರಾಗಿ ಮತ್ತು ನಲವತ್ತು ವರ್ಷದಿಂದ ಜತೆಗಿದ್ದೇವೆ. ಮುಂದಿನ ದಿನಗಳಲ್ಲಿ ಪುತ್ರ ಕಿರೀಟಿ ಅಭಿನಯದ ಜೂನಿಯರ್ ಸಿನಿಮಾವನ್ನು ಒಟ್ಟಿಗೆ ವೀಕ್ಷಿಸಲಿದ್ದೇವೆ ಎಂದು ಹೇಳಿದರು.

ಬಳಿಕ ಮಾಜಿ ಶಾಸಕ ಜಿ.ಸೋಮಶೇಖರರೆಡ್ಡಿ, ಪತ್ನಿ ಅರುಣಾ ಲಕ್ಷ್ಮೀ, ಪುತ್ರ ಕಿರೀಟಿ ಜತೆ ಜಿ. ಜನಾರ್ದನರೆಡ್ಡಿ ಅವರು ಜೂನಿಯರ್ ಸಿನಿಮಾ ವೀಕ್ಷಿಸಿದರು.