ಮಹಾಲಿಂಗಪುರ ಸಮೀಪದ ರನ್ನಬೆಳಗಲಿ ಪಪಂ ಕಾರ್ಯಾಲಯದ ಪೌರಕಾರ್ಮಿಕರಿಗೆ ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಸ್ಥಳೀಯ ಕಾಂಗ್ರೆಸ್ ಪಕ್ಷದಿಂದ ಉಡುಗೊರೆ ನೀಡಿ ಸತ್ಕರಿಸಲಾಯಿತು. ಪಪಂ ಸದಸ್ಯರಾದ ಪ್ರವೀಣ ಪಾಟೀಲ, ನೀಲಕಂಠ ಸೈದಾಪುರ, ಮುಭಾರಕ ಅತ್ತಾರ ಇದ್ದರು. 
ಜಿಲ್ಲೆ

ಪೌರಕಾರ್ಮಿಕರ ಸೇವೆಗೆ ಎಷ್ಟು ಗೌರವ ನೀಡಿದರೂ ಸಾಲದು

ಮಹಾಲಿಂಗಪುರ: ಸಮೀಪದ ರನ್ನಬೆಳಗಲಿ ಪಟ್ಟಣ ಪಂಚಾಯಿತಿ ಕಾರ್ಯಾಲಯದ ಪೌರಕಾರ್ಮಿಕರಿಗೆ ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಸ್ಥಳೀಯ ಕಾಂಗ್ರೆಸ್ ಮತ್ತು ಪಕ್ಷದ ಪಟ್ಟಣ ಪಂಚಾಯಿತಿ ಸದಸ್ಯರ ಆಶ್ರಯದಲ್ಲಿ ಭಾನುವಾರ ಉಡುಗೊರೆ ವಿತರಣೆ ಹಾಗೂ ಸತ್ಕಾರ ಸಮಾರಂಭ ನಡೆಯಿತು.

ಪಪಂ ಸದಸ್ಯ ಪ್ರವೀಣ ಪಾಟೀಲ ಮಾತನಾಡಿ, ನಿರ್ಮಲ, ಆರೋಗ್ಯಕರ ಪಟ್ಟಣದ ರೂವಾರಿಗಳೇ ಪೌರಕಾರ್ಮಿಕರು. ಅವರ ಸೇವೆಗೆ ಎಷ್ಟು ಗೌರವ ನಿಡಿದರೂ ಕಡಿಮೆ. ಕರೊನಾ ವೇಳೆ ಯಾವುದೇ ರೀತಿಯ ಮಾರಣಾಂತಿಕ ಕಾಯಿಲೆಗಳಿಗೆ ಹೆದರದೆ ತಮ್ಮ ಆರೋಗ್ಯ ಲೆಕ್ಕಿಸದೆ ಪಟ್ಟಣದ ಜನತೆಯ ಆರೋಗ್ಯಕ್ಕಾಗಿ ಶ್ರಮಿಸಿದ್ದಾರೆ ಎಂದು ತಿಳಿಸಿದರು.

ಪಪಂ ಕಾಂಗ್ರೆಸ್ ಸದಸ್ಯ ನೀಲಕಂಠ ಸೈದಾಪುರ, ಮುಭಾರಕ ಅತ್ತಾರ, ಮುತ್ತು ಸಣ್ಣಟ್ಟಿ, ಮುತ್ತು ನಾಯಕ, ಕಾಂಗ್ರೆಸ್ ಮುಖಂಡರಾದ ಸಂಗಪ್ಪ ಅಮಾತಿ, ಈರಪ್ಪ ಕಿತ್ತೂರ, ಸದಾಶಿವ ಕುಲಗೋಡ, ಮಲ್ಲಪ್ಪ ಮಲಾವಡಿ, ಸಿದ್ದು ಮಾಳಿ, ರಾಮನಗೌಡ ಪಾಟೀಲ, ಯಮನಪ್ಪ ದೊಡಮನಿ, ಯಮನಪ್ಪ ಪೂಜೇರಿ, ಮಲ್ಲು ಹೊಸಪೇಟಿ, ಪ್ರಕಾಶ ಕೊಣ್ಣೂರ, ಮುದಕಪ್ಪ ದೋಬಸಿ, ಚನ್ನಪ್ಪ ಜಾಲಿಕಟ್ಟಿ, ಲಕ್ಕಪ್ಪ ಹಂಚಿನಾಳ, ಬಸು ಗೌರಣ್ಣವರ, ಮಾರುತಿ ಜಾಲಿಕಟ್ಟಿ, ಮಹಾದೇವ ಹಾದಿಮನಿ, ಹಣಮಂತ ಹೊಸೂರ, ಸವಿತಾ ಚವಲಿ, ಪರಮಾನಂದ ಪೂಜೇರಿ, ಮುತ್ತಪ್ಪ ಸಂಕ್ರಟ್ಟಿ, ಚನ್ನಪ್ಪ ಸಾಲಿಮಠ, ಚೇತನ ಕಂಕನವಾಡಿ, ಸುಭಾಸ ಪುರಾಣಿಕ ಇತರರಿದ್ದರು.