ಪ್ರಮೋದಾದೇವಿ ಒಡೆಯರ್್ 
ಜಿಲ್ಲೆ

ಜಟ್ಟಿಕಾಳಗ ರದ್ದಾಗಿರುವುದರಿಂದ ನಾಡಿಗೆ ಯಾವುದೇ ಕೆಡುಕು ಇಲ್ಲ : ಪ್ರಮೋದಾದೇವಿ ಒಡೆಯರ್

ಮೈಸೂರು: ದಸರಾ ಸಂದರ್ಭ ಅರಮನೆಯಲ್ಲಿ ನಡೆಯಬೇಕಾಗಿದ್ದ ಜಟ್ಟಿಕಾಳಗ ರದ್ದಾಗಿರುವುದರಿಂದ ನಾಡಿಗೆ ಯಾವುದೇ ಕೆಡುಕು ಆಗುವುದಿಲ್ಲ ಎಂದು ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದರು.

ಚಾಮುಂಡಿಬೆಟ್ಟದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಟ್ಟಿಕಾಳಗ ರದ್ದಾಗಿರುವ ವಿಚಾರದಲ್ಲಿ ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ. ನಾವು ದೇವರನ್ನು ನಂಬಿದ್ದೇವೆ, ನಾವು ಜ್ಯೋತಿಷ್ಯವನ್ನು ನಂಬಿಲ್ಲ. ನಾವು ಜ್ಯೋತಿಷ್ಯ ನಂಬಿ ಪೂಜೆ ಮಾಡುವುದಿಲ್ಲ, ದೇವರನ್ನು ಮಾತ್ರ ನಂಬುತ್ತೇವೆ ಎಂದರು.

ಜಟ್ಟಿಕಾಳಗ ವಿಚಾರದಲ್ಲಿ ಏನೇನೊ ಅರ್ಥಗಳನ್ನು ಕಲ್ಪಿಸಬೇಡಿ, ಈ ವಿಚಾರದ ಬಗ್ಗೆ ಒಂದರೆಡು ದಿನದಲ್ಲಿ ನಾನೇ ವಿವರಣೆ ಕೊಡುತ್ತೇನೆ. ಈ ಕುರಿತು ಎಲ್ಲ ಮಾಹಿತಿ ತರಿಸಿಕೊಳ್ಳುತ್ತಿದ್ದೇನೆ. ಎಲ್ಲಿ, ಏನಾಯಿತು ಎಂಬ ಬಗ್ಗೆ ನನಗೆ ಮಾಹಿತಿ ತಿಳಿದಿದೆ. ಆದರೂ ಸಂಪೂರ್ಣ ಮಾಹಿತಿ ಬಂದ ಮೇಲೆ ಮಾತನಾಡುತ್ತೇನೆ ಎಂದು ಹೇಳಿದರು.

ಮೈಸೂರು ಅರಮನೆಯ ವಿಧಿವಿಧಾನಗಳು ಆಯಾ ಮೂಹರ್ತಕ್ಕೆ ನಡೆಯಬೇಕು. ಮೂಹರ್ತ ಮೀರಿ ನಾವು ನಡೆಸುವುದಿಲ್ಲ. ಜಟ್ಟಿ ಕಾಳಗ ಸರಿಯಾದ ಸಮಯಕ್ಕೆ ನಡೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿಜಯಾತ್ರೆ ನಡೆಸಿದರು. ನಾನು ಈ ವಿಚಾರದಲ್ಲಿ ಯಾವ ಜ್ಯೋತಿಷ್ಯವನ್ನು ಕೇಳಿಲ್ಲ, ಎಲ್ಲ ದೇವರ ಮೇಲೆ ಭಾರ ಹಾಕಿದ್ದೇವೆ. ಹೀಗಾಗಿ ನಾನು ಆತಂಕಕ್ಕೆ ಒಳಗಾಗಿಲ್ಲ ಎಂದರು.

ಈ ಬಾರಿಯ ಅಂಬಾರಿ ಆನೆ ಪ್ರಶಾಂತನ ವಿಚಾರವಾಗಿ ನನಗೆ ಆತಂಕ ಇತ್ತು. ಯಾವ ರೀತಿಯಾಗಿ ಅಂಬಾರಿ ಕಟ್ಟಿಸಿಕೊಳ್ಳುತ್ತಾನೋ, ಯಾವ ರೀತಿ ನಡೆಯುತ್ತಾನೊ ಎಂಬ ಆತಂಕ. ಹಿಂದೆ ನನಗೆ ಈ ರೀತಿ ಯಾವ ಆತಂಕ ಇರಲಿಲ್ಲ. ಈ ಬಾರಿಯೇ ನನಗೆ ಆತಂಕ ನಿರ್ಮಾಣವಾಗಿತ್ತು. ಎಲ್ಲ ಆತಂಕ ಮೀರಿ ಪ್ರಶಾಂತ ಚೆನ್ನಾಗಿ ಅಂಬಾರಿ ಹೊತ್ತಿದ್ದು ನನಗೆ ಬಹಳ ಸಂತೋಷ ಆಗಿದೆ. ಚಾಮುಂಡಿ ತಾಯಿ ಎಲ್ಲರಿಗೂ ಆಶೀರ್ವಾದ ಮಾಡಿದ್ದಾಳೆ ಎಂದು ಹೇಳಿದರು.

ರಾಜ್ಯದ ಜನರನ್ನು ತಾಯಿ ಶ್ರೀ ಚಾಮುಂಡೇಶ್ವರಿ ಕಾಪಾಡುತ್ತಿದ್ದಾಳೆ, ಮುಂದೆಯೂ ಕೂಡ ಆಕೆ ಎಲ್ಲರನ್ನೂ ಕಾಪಾಡ್ತಾಳೆ. ಶುಭಸೂಚಕವಾಗಿ ಇದೀಗ ಮಳೆ ಬರುತ್ತಿದೆ, ಇದು ರಾಜ್ಯಕ್ಕೆ ಒಳ್ಳೆಯ ಸಂಕೇತ. ನಾಡಿನ ಅನ್ನದಾತರಿಗೆ ಸದಾ ಒಳಿತಾಗಲಿ. ಸುಖ, ಶಾಂತಿ, ನೆಮ್ಮದಿಯಿಂದ ಜನರು ಬಾಳಲಿ ಎಂದು ಹಾರೈಸಿದರು.

ದಸರಾ ಸಂದರ್ಭ ಅರಮನೆಯಲ್ಲಿ ನಡೆಯಬೇಕಾಗಿದ್ದ ಜಟ್ಟಿಕಾಳಗ ರದ್ದಾಗಿರುವುದರಿಂದ ನಾಡಿಗೆ ಯಾವುದೇ ಕೆಡುಕು ಆಗುವುದಿಲ್ಲ ಎಂದು ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದರು.