ಸಿಂಧನೂರು ತಾಲೂಕಿನ ಚಿರ್ತನಾಳ ಗ್ರಾಮದ ನಳದಲ್ಲಿ ಕಲುಷಿತ ನೀರು ಪೂರೈಕೆ ಮಾಡುತ್ತಿರುವುದು 
ಜಿಲ್ಲೆ

ಕಲಬುರಗಿ ನಗರಕ್ಕೆನೀರು ಸರಬರಾಜಿನಲ್ಲಿ ವ್ಯತ್ಯಯ 8, 9ರಂದು


ಕಲಬುರಗಿ: ನಗರಕ್ಕೆ ನೀರು ಸರಬರಾಜು ಮಾಡುವ ಸರಡಗಿ ಭೀಮಾ ನದಿಯಿಂದ ನೀರು ಸರಬರಾಜಾಗುವ ಮುಖ್ಯ ಕೊಳವೆ ಮಾರ್ಗದಲ್ಲಿ ದುರಸ್ತಿ ಹಿನ್ನೆಲೆಯಲ್ಲಿ ನಗರದಲ್ಲಿ ಸೆ.೮, ೯ರಂದು ಎರಡು ದಿನ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕೆಯುಐಡಿಎಫ್‌ಸಿ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ. ಕಲಬುರಗಿ ನಗರದ ಬಿದ್ದಾಪೂರ, ವಿಶಾಲನಗರ, ಅಂಭಿಕಾ ನಗರ, ಪಿ ಆಂಡ್ ಟಿ ಕಾಲನಿ, ವಿದ್ಯಾನಗರ, ಯಶವಂತ ನಗರ, ಕರುಣೇಶ್ವರ ನಗರ, ಗಣೇಶ ನಗರ, ಭಾಗ್ಯವಂತಿ ನಗರ, ದೇವಾ ನಗರ, ತಿಲಕ್‌ನಗರ, ಬನಶಂಕರಿ ನಗರ, ಗಾಭರೆ ಲೇಔಟ್, ಕೃಷ್ಣ ನಗರ, ತಾರಫೈಲ್, ಎನ್‌ಜಿಓ ಕಾಲನಿ, ಜೇವರ್ಗಿ ಕಾಲನಿ, ಮಾಕಾ ಲೇಔಟ್, ಸಂತೋಷ ಕಾಲೋನಿ, ಬ್ಯಾಂಕ್ ಕಾಲೋನಿ, ಬಾಲಾಜಿ ನಗರ, ಸಂಪಿಗೆ ನಗರ, ಬುದ್ಧನಗರ, ರೇವಣಸಿz್ದೆÃಶ್ವರ ಕಾಲನಿ, ಸಾಯಿ ನಗರ, ಓಝಾ ಲೇಔಟ್, ಸ್ವಾಮಿ ವಿವೇಕಾನಂದ ನಗರ, ಪ್ರಗತಿ ಕಾಲನಿ, ಸಿಐಬಿ ಕಾಲನಿ, ಶಕ್ತಿ ನಗರ, ಸ್ಟೇಷನ್ ಬಜಾರ, ಐವಾನ್ ಶಾಹಿ, ವಿಠ್ಠಲನಗರ, ಖುಬಾ ಪ್ಲಾಟ್, ಶೇಖ ರೋಜಾ, ಕೈಲಾಸ ನಗರ, ಕಸ್ತೂರಿ ನಗರ, ಆಶ್ರಯ ಕಾಲನಿ, ಪೂಜಾ ಕಾಲನಿ, ಜಾಗೃತಿ ಕಾಲನಿ ಸೇರಿ ವಿವಿಧೆಡೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದರು.