ಜಿಲ್ಲೆ

ಗಣೇಶೋತ್ಸವಕ್ಕಿಲ್ಲ ಡಿಜೆ ಪರವಾನಗಿ

ವಿನಯ ಹೆಗಡೆ

ಅಣ್ಣಿಗೇರಿ: ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬವನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸಬೇಕು. ಯಾವುದೇ ಕಾರಣಕ್ಕೂ ಡಿಜೆ ಹಚ್ಚುವಂತಿಲ್ಲ ಎಂದು ಸಿಪಿಐ ಪ್ರಮೋದ ಯಲಿಗಾರ ಹೇಳಿದರು.

ಮಂಗಳವಾರ ಸಂಜೆ ಅಣ್ಣಿಗೇರಿ ಪೊಲೀಸ್ ಠಾಣೆ ಆವರಣದಲ್ಲಿ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.

ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಸರ್ಕಾರದ ಮಾರ್ಗಸೂಚಿಯಂತೆ ಹಬ್ಬ ಆಚರಿಸಬೇಕು. ಪುರಸಭೆ, ಹೆಸ್ಕಾಂ, ಪೊಲೀಸ್ ಇಲಾಖೆಯ ಪರವಾನಗಿ ಪಡೆದುಕೊಂಡಿರಬೇಕು ಎಂದು ಸೂಚಿಸಿದರು.

ಮತ್ತು ಅಣ್ಣಿಗೇರಿ ಠಾಣೆ ಪಿಎಸ್​ಐ ಸಿದ್ದಾರೂಢ ಆಲದಕಟ್ಟೆ ಮಾತನಾಡಿ, ಈದ ಮಿಲಾದ್ ಹಾಗೂ ಗಣೇಶ ಚತುರ್ಥಿ ಸೌಹಾರ್ದತೆಯಿಂದ ಆಚರಿಸಬೇಕು. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಷಣ್ಮುಖ ಗುರಿಕಾರ, ಮಂಜುನಾಥ ಮಾಯಣ್ಣನವರ, ಆಸೀಫ್ ಗುಳೇದಗುಡ್ಡ, ಭರತೇಶ ಜೈನ, ಭಗವಂತಪ್ಪ ಪುಟ್ಟನ್ನವರ, ನಾಗರಾಜ ದಳವಾಯಿ, ಅಶೋಕ ಕುರಿ, ವೀರೇಶ ಸುರಕೋಡ, ಮಂಜು ಪಾಟೀಲ, ಇಮಾಮ್ ಸಾಬ್ ದರ್ವನ್, ಮಾಂತೇಶ ತಹಶೀಲ್ದಾರ್, ಶಿವಣ್ಣ ಹೊಸಹಳ್ಳಿ, ಈರಣ್ಣ ಗುರಿಕಾರ, ಸಾಗರ ಕಾಳಪ್ಪನವರ ಮತ್ತಿತರರು ಇದ್ದರು.