ಮದ್ದೂರು ತಾಲೂಕಿನ ತೈಲೂರು ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಎಂ.ಉದಯ್ ಭೂಮಿಪೂಜೆ ಮಾಡಿದರು. ಚಲುವರಾಜು, ತಿಮ್ಮೇಗೌಡ, ಪುಟ್ಟಪ್ಪ, ರಾಕೇಶ್, ಸೋಮಯ್ಯ ಇದ್ದರು.  
ಜಿಲ್ಲೆ

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ವಿಸರ್ಜನೆ ಇಲ್ಲ

ಮದ್ದೂರು: ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯನ್ನು ಯಾವುದೇ ಕಾರಣಕ್ಕೆ ವಿಸರ್ಜನೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.

ತಾಲೂಕಿನ ತೈಲೂರು ಗ್ರಾಮದಲ್ಲಿ ಬುಧವಾರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ರಾಜ್ಯದ ಯಾವುದೇ ತಾಲೂಕುಗಳಲ್ಲಿ ಯಾವುದೇ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಪಟ್ಟಂತೆ ಲೋಪ ಕಂಡು ಬಂದರೆ ಸಂಬಂಧಪಟ್ಟ ಅನುಷ್ಠಾನ ಸಮಿತಿ ಗಮನಕ್ಕೆ ತಂದು ಸಮಸ್ಯೆ ಸರಿಮಾಡಿಸಿಕೊಳ್ಳಬೇಕು. ಇದಕ್ಕಾಗಿಯೇ ಸಮಿತಿಯನ್ನು ರಾಜ್ಯ ಸರ್ಕಾರವೇ ರಚಿಸಿದೆ ಎಂದರು.

ಇದನ್ನರಿಯದ ಬಿಜೆಪಿ ಪಕ್ಷದ ನಾಯಕರು ಅನುಷ್ಠಾನ ಸಮಿತಿಗಳನ್ನು ವಿಸರ್ಜನೆ ಮಾಡಬೇಕೆಂದು ಒತ್ತಾಯಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಬಿಜೆಪಿಯವರದ್ದು ಮೊಸರಲ್ಲಿ ಕಲ್ಲು ಹುಡುಕುವ ಕೆಲಸವಾಗಿದೆ ಎಂದು ಕಿಡಿಕಾರಿದರು.

ರಾಜ್ಯ ಸರ್ಕಾರ ಜನತೆಯ ಮೇಲೆ ಸಾಲದ ಭಾರವನ್ನು ಹೆಚ್ಚು ಮಾಡಿದೆ ಎಂದು ವಿಪಕ್ಷಗಳ ನಾಯಕರು ಬಜೆಟ್ ಕುರಿತು ಟೀಕಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ಕೇಂದ್ರ ಸರ್ಕಾರ ಸಾಲ ಮಾಡಿಲ್ಲವೇ ಎಂದು ಕಾರವಾಗಿ ಪ್ರಶ್ನಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಲುವರಾಜು, ಮುಖಂಡರಾದ ತಿಮ್ಮೇಗೌಡ, ಪುಟ್ಟಪ್ಪ, ಸೋಮಯ್ಯ, ರಾಕೇಶ್ ಇದ್ದರು.