No decision to close Bagalkote University 
ಜಿಲ್ಲೆ

ಬಾಗಲಕೋಟೆ ವಿವಿ ಮುಚ್ಚುವ ನಿರ್ಧಾರ ಬೇಡ

Vijayapura - Desk - Doddanagouda Gudihindin

ಇಳಕಲ್ಲ (ಗ್ರಾ): ಬಾಗಲಕೋಟೆ ವಿಶ್ವವಿದ್ಯಾಲಯ ಮುಚ್ಚುವ ನಿರ್ಧಾರ ಮಾಡದೆ, ವಿದ್ಯಾರ್ಥಿಗಳ ಕಲಿಕೆಗೆ ಪೂರಕ ವಾತವರಣ ನಿರ್ಮಿಸಿ ಸದೃಢಗೊಳಿಸಲು ಅಗತ್ಯ ಅನುದಾನ ನೀಡಬೇಕೆಂದು ನಗರದ ಶಾಸಕರ ಕಚೇರಿಯಲ್ಲಿ ಸೋಮವಾರ ವಿಜಯಾನಂದ ಕಾಶಪ್ಪನವರ ಅವರಿಗೆ ಎಸ್‌ಐಒ ನಿಯೋಗ ಮನವಿ ಸಲ್ಲಿಸಿತು.

2023-24ರಲ್ಲಿ ಸ್ಥಾಪಿಸಲಾದ ರಾಜ್ಯದ 10 ಹೊಸ ವಿಶ್ವವಿದ್ಯಾಲಯಗಳಲ್ಲಿ 9 ವಿಶ್ವವಿದ್ಯಾಲಗಳನ್ನು ರಾಜ್ಯ ಸರ್ಕಾರ ಮುಚ್ಚುವ ಚಿಂತನೆಯಲ್ಲಿದ್ದು, ಅದರಲ್ಲಿ ಬಾಗಲಕೋಟೆ ವಿವಿಯೂ ಒಂದಾಗಿದೆ. 73 ಸಂಯೋಜಿತ ಕಾಲೇಜು ಹಾಗೂ 30 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಬಾಗಲಕೋಟೆ ವಿವಿ ಮುಚ್ಚುವ ನಿರ್ಧಾರ ಕೈಬಿಡಬೇಕು. 2014-15ರ ರಾಜ್ಯ ವಾರ್ಷಿಕ ಬಜೆಟ್‌ನಲ್ಲಿ ಘೋಷಣೆಯಾದ ಬಾಗಲಕೋಟೆ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಅಗತ್ಯ ಅನುದಾನ ನೀಡಬೇಕು ಮತ್ತು ತಕ್ಷಣವೇ ವೈದ್ಯಕೀಯ ಕಾಲೇಜು ಕಾರ್ಯಾರಂಭ ಮಾಡಬೇಕು. ಈ ಎರಡು ವಿಷಯಗಳಿಗೆ ಸಂಬಂಧಪಟ್ಟಂತೆ ಸರ್ಕಾರದ ಮಟ್ಟದಲ್ಲಿ ಶಾಸಕರು ಧ್ವನಿ ಎತ್ತಬೇಕು ಎಂದು ಜಿಲ್ಲಾಧ್ಯಕ್ಷ ಮೊಹಮ್ಮದ್ ಪೀರ್ ಲಟಗೇರಿ ಒತ್ತಾಯಿಸಿದರು.

ಸ್ಥಾನಿಕ ಅಧ್ಯಕ್ಷ ಆಸ್ಿ ಹುಣಚಗಿ, ಕಾರ್ಯದರ್ಶಿ ಉಸ್ಮಾನ್ ಗನಿ ಶಿವನಗುತ್ತಿ ಮತ್ತು ನಹೀಮ್ ರಾಂಪುರ ಮತ್ತಿತರರಿದ್ದರು.