ಮಂಡ್ಯ: ರಾಜ್ಯಸರ್ಕಾರ ಗೃಹಲಕ್ಷ್ಮೀ ಯೋಜನೆಯ ನೋಂದಣಿಗೆ ಕೊನೆಯ ದಿನಾಂಕ ನಿಗದಿ ಮಾಡಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ತಿಳಿಸಿದ್ದಾರೆ.
ಯೋಜನೆಯ ನೋಂದಣಿಗೆ ಆಧಾರ್‌ಕಾರ್ಡ್‌ನೊಂದಿಗೆ ಮೊಬೈಲ್ ಸಂಖ್ಯೆ ಜೋಡಣೆಯಾಗಿರಬೇಕು. ಆಧಾರ್ ಸಂಖ್ಯೆಗೆ ಮೊಬೈಲ್ ಸಂಖ್ಯೆ ಜೋಡಣೆ ಈವರೆಗೂ ಮಾಡದಿದ್ದಾರೆ ಆತಂಕಕ್ಕೆ ಒಳಗಾಗುವುದು ಬೇಡ. ಮಹಿಳೆಯರು ತಾಳ್ಮೆಯಿಂದ ನೋಂದಣಿ ಮಾಡಿಸಬಹುದು. ಜಿಲ್ಲೆಯ 79 ಕೇಂದ್ರಗಳಲ್ಲಿ ಆಧಾರ್ ತಿದ್ದುಪಡಿ, ಅಂಚೆ ಕಚೇರಿ-32, ಬ್ಯಾಂಕ್-19, ಬಿ.ಎಸ್.ಎನ್.ಎಲ್-15, ಕಾಮನ್ ಸಿಟಿಜನ್ ಸರ್ವಿಸ್ ಸೆಂಟರ್-11, ಎ.ಎಸ್.ಕೆ ಕೇಂದ್ರ- 2 ಕೇಂದ್ರಗಳಲ್ಲಿ ಆಧಾರ್ ತಿದ್ದುಪಡಿ ಕೆಲಸ ನಡೆಯುತ್ತಿದೆ ಎಂದಿದ್ದಾರೆ.
ಪ್ರತಿದಿನ ಬೆಳಗ್ಗೆ ಆಧಾರ್ ತಿದ್ದುಪಡಿಗೆ ನೂಕು ನುಗ್ಗಲು ಹಾಗೂ ಸಾರ್ವಜನಿಕರು ಬಂದು ಗಂಟೆಗಟ್ಟಲೆ ಕಾಯುವುದನ್ನು ತಪ್ಪಿಸಲು ಪ್ರತಿದಿನ ಬೆಳಿಗ್ಗೆ ಟೋಕನ್ ವಿತರಿಸಬೇಕು. ಸರಿಯಾದ ಸಮಯಕ್ಕೆ ತಿದ್ದುಪಡಿ ಕೆಲಸ ಪ್ರಾರಂಭಿಸುವಂತೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಇದಲ್ಲದೆ ಇನ್ನೂ ಹೆಚ್ಚುವರಿಯಾಗಿ 78 ಸೆಂಟರ್‌ಗಳನ್ನು ಗ್ರಾಮ ಒನ್‌ನಲ್ಲಿ ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಆಧಾರ್ ತಿದ್ದುಪಡಿಯನ್ನು ಎಲ್ಲ ಸೆಂಟರ್‌ಗಳಲ್ಲಿ ಮಾಡಲು ಸಾಧ್ಯವಿಲ್ಲ. ಇದಕ್ಕಾಗಿ ಸೆಂಟರ್‌ನವರು ಪರೀಕ್ಷೆ ಬರೆದು ಶುಲ್ಕ ಪಾವತಿಸಿ ಲಾಗ್ ಇನ್ ಕ್ರಡನ್ಸಿಯಲ್ ಪಡೆದುಕೊಳ್ಳಬೇಕು. ಇದಕ್ಕೆ ಗ್ರಾಮ ಒನ್ ಅವರಿಗೆ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ಹೇಳಿದ್ದಾರೆ.