ಶ್ರೀನಿವಾಸಪುರ: ತಾಲೂಕಿನ ತಾಡಿಗೋಳ್ ಗ್ರಾಮ ಪಂಚಾಯಿತಿಯ ಅಧ್ಯೆಕ್ಷೆ ಮತ್ತು ಉಪಾಧ್ಯೆಕ್ಷೆ ವಿರುದ್ಧ ಸದಸ್ಯರು ಅವಿಶ್ವಾಸ ಮಂಡಿಸಿದ್ದು, ಉಪವಿಭಾಗಾಧಿಕಾರಿ ಡಾ. ಮೈತ್ರಿ ಅವರು ಇಬ್ಬರ ಅಧಿಕಾರ ತೆರವು ಮಾಡಿ ಆದೇಶಿಸಿದ್ದಾರೆ.
ಡಿ.10ರಂದು ಎಲ್ಲ ಸದಸ್ಯರು ಉಪವಿಭಾಗಾಧಿಕಾರಿ ಕಚೇರಿಗೆ ಬಂದು ಅವಿಶ್ವಾಸ ರ್ನಿಣಯ ಸಭೆ ಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಡಾ.ಮೈತ್ರಿ ಅವರು ತಾಡಿಗೋಳ್ ಗ್ರಾಪಂ ಕಚೇರಿಯಲ್ಲಿ ಶನಿವಾರ ಅವಿಶ್ವಾಸ ಮಂಡನೆ ಸಭೆ ನಿಗದಿಪಡಿಸಿದ್ದರು.
ಸಭೆಯಲ್ಲಿ ಒಟ್ಟು 19 ಸದಸ್ಯರ ಪೈಕಿ 13 ಸದಸ್ಯರು ಹಾಜರಾಗಿ, 6 ಮಂದಿ ಗೈರಾಗಿದ್ದರು. ಸದಸ್ಯರೊಂದಿಗೆ ಸಮಾಲೋಚಿಸಿ ಅವಿಶ್ವಾಸ ರ್ನಿಣಯದ ಪರ ಮತ ಹಾಕಿದ್ದಾರೆ ಎಂದು ಎಸಿ ಡಾ.ಮೈತ್ರಿ ಮಾಹಿತಿ ನೀಡಿದರು.
ಅಧ್ಯಕ್ಷೆ ಶ್ರೀಮತಿ, ಉಪಾಧ್ಯಕ್ಷೆ ಕೆ.ಬಿ.ಪಲ್ಲವಿ ಅವರ ವಿರುದ್ಧ 13ಮಂದಿ ಕೈ ಎತ್ತುವ(ಸಂಜ್ಞೆ) ಮೂಲಕ ಅವಿಶ್ವಾಸ ಮಂಡನೆ ಮಾಡಿದ್ದಾರೆ. ಇದರಿಂದ ಅಧ್ಯೆ&ಉಪಾಧ್ಯೆ ಸ್ಥಾನದಿಂದ ಅನುರ್ಜಿತಗೊಳಿಸಿದ್ದು, ಜಿಲ್ಲಾ ಚುನಾವಣಾಧಿಕಾರಿಗೆ ಮಾಹಿತಿ ನೀಡಲಾಗುವುದು. ನಂತರ ಚುನಾವಣೆ ನಿಗದಿ ಕುರಿತು ರ್ನಿಣಯಿಸಿ, 10ದಿನಗಳ ಮುನ್ನ ನೋಟಿಸ್ ಜಾರಿಗೊಳಿಸಿ, ಚುನಾವಣೆ ನಡೆಸಲಾಗುವುದು ಎಂದು ತಿಳಿಸಿದರು.