ಚನ್ನಪಟ್ಟಣ: ತಾಲೂಕಿನ ಮಳೂರು ಗ್ರಾಮ ಪಂಚಾಯತಿ ಅಧ್ಯ ಚೇತನ್ ಕುಮಾರ್ ವಿರುದ್ಧ 11 ಸದಸ್ಯರು ಸೋಮವಾರ ಮಂಡಿಸಿದ ಅವಿಶ್ವಾಸ ಗೊತ್ತುವಳಿ ಅಂಗೀಕಾರವಾಗಿದೆ.
ತಾಲೂಕಿನ ಮಳೂರು ಗ್ರಾ.ಪಂ 16 ಸದಸ್ಯರ ಬಲ ಹೊಂದಿದ್ದು, ಗ್ರಾಪಂ ಅಧ್ಯ ಚೇತನ್ಕುಮಾರ್ ವಿರುದ್ಧ ಗ್ರಾ.ಪಂನ 11 ಸದಸ್ಯರು ಅವಿಶ್ವಾಸ ಗೊತ್ತುಳಿಗೆ ಅರ್ಜಿ ಸಲ್ಲಿಸಿದರು. ಇದರ ಮಧ್ಯೆ ವಿಚಾರವು ನ್ಯಾಯಾಲಯದ ಮೆಟ್ಟಿಲೇರಿತ್ತು. ಅವಿಶ್ವಾಸ ಗೊತ್ತುವಳಿಗೆ ನ್ಯಾಯಾಲಯ ಆದೇಶ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲಾ ಉಪವಿಭಾಗಾಧಿಕಾರಿ ಬಿನೋಯ್ ಸೋಮವಾರ ಕಚೇರಿಯಲ್ಲಿ ಗೊತ್ತುವಳಿ ಸಭೆಯನ್ನು ಕರೆದಿದ್ದರು. ಸಭೆಯಲ್ಲಿ ಗ್ರಾಪಂನ 11 ಮಂದಿ ಸದಸ್ಯರು ಅಧ್ಯ ಚೇತನ್ಕುಮಾರ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಾಡಿದರು.
ಸಭೆಗೆ ಗ್ರಾಪಂ ಅಧ್ಯ ಚೇತನ್ ಕುಮಾರ್, ಉಪಾಧ್ಯೆ ಅನಿತಾ, ಸದಸ್ಯರಾದ ಎಂ.ಸಿ.ರಾಜೇಶ್, ಕೆ.ಟಿ.ಪದ್ಮ, ನಾಗಮ್ಮ ಗೈರಾಗಿದ್ದರು.
ಅಧ್ಯರ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ಸದಸ್ಯರಾದ ಸುಷ್ಮಾಶ್ರೀ, ಎಚ್.ಪ್ರಕಾಶ್, ಎಂ.ವಿ. ಮುರುಳೀಧರ, ಸುಶೀಲ, ಸುಶೀಲಮ್ಮ, ಮೀನಾ, ಬಿ.ಎನ್.ಮಹೇಶ್, ರಶ್ಮಿ, ಬಿ.ಟಿ.ದಿಲೀಪ್, ರಾಜು, ವೆಂಕಟೇಶ್ ಸಹಮತ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಪವಿಭಾಗಾಧಿಕಾರಿ ಬಿನೋಯ್, ಹೈಕೋರ್ಟ್ ಆದೇಶದಂತೆ ಕರೆಯಲಾಗಿದ್ದ ಅವಿಶ್ವಾಸ ಗೊತ್ತುವಳಿ ಸಭೆಯಲ್ಲಿ ಗ್ರಾಪಂನ 11 ಸದಸ್ಯರು ಅಧ್ಯರ ವಿರುದ್ಧ ಅವಿಶ್ವಾಸ ಮಂಡಿಸಿದ್ದಾರೆ. ಈ ನಿಟ್ಟಿನಲ್ಲಿ ಅಧ್ಯರು ಈ ಣದಿಂದಲೇ ಅಧ್ಯ ಸ್ಥಾನದಿಂದ ತೆರವುಗೊಂಡಿದ್ದಾರೆ. ಸದ್ಯ ಅಧ್ಯ ಸ್ಥಾನ ಖಾಲಿ ಇದ್ದು, 15 ದಿನಗಳೊಳಗೆ ಅಧ್ಯರ ಚುನಾವಣೆ ನಡೆಯಲಿದೆ. ಅಲ್ಲಿವರೆಗೆ ಉಪಾಧ್ಯರು ಪ್ರಭಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಅವಿಶ್ವಾಸ ಮಂಡಿಸಿ ಮಾತನಾಡಿದ ಸದಸ್ಯರು, ಅಧ್ಯ ಚೇತನ್ ಕುಮಾರ್ ಸರ್ವಾಧಿಕಾರಿಯಂತೆ ವರ್ತಿಸುವ ಜತೆಗೆ ಅವ್ಯವಹಾರ ನಡೆಸುತ್ತಿದ್ದರು. ಅಲ್ಲದೆ ನಮಗೆ ಗೌರವ ನೀಡುತ್ತಿರಲಿಲ್ಲ. ಗ್ರಾಪಂ ಅಭಿವೃದ್ಧಿಗೂ ಸಹಕರಿಸುತ್ತಿರಲಿಲ್ಲ. ಹಾಗಾಗಿ ಅವಿಶ್ವಾಸ ಮಂಡಿಸಲಾಗಿದೆ. ಇದು ಸತ್ಯಕ್ಕೆ ಸಿಕ್ಕ ಜಯ ಎಂದರು.
ಗರಿಗೆದರಿದ ಹಳ್ಳಿ ರಾಜಕೀಯ!
ಇತ್ತೀಚೆಗೆ ಗ್ರಾಪಂ ಚುನಾವಣೆಗಳೂ ಸಹ ಪಾರ್ಲಿಮೆಂಟ್ ಚುನಾವಣೆಗೂ ಕಮ್ಮಿ ಇಲ್ಲದಂತೆ ನಡೆಯುತ್ತಿವೆ. ಈ ಹಿಂದೆ ತಾಲೂಕಿನ ವಿವಿಧ ಗ್ರಾಪಂ ಚುನಾವಣೆಗಳೇ ಇದಕ್ಕೆ ಉದಾಹರಣೆ. ಗ್ರಾಪಂಗಳು ರಾಜಕೀಯ ಪ್ರಮುಖ ಶಕ್ತಿಕೇಂದ್ರಗಳೆಂದೇ ಖ್ಯಾತಿ ಗಳಿಸಿವೆ. ಈ ಅವಧಿ ಮುಕ್ತಾಯಗೊಳ್ಳಲು ದಿನಗಣನೆ ಆರಂಭಗೊಂಡಿರುವ ಬೆನ್ನಲ್ಲೆ ಮತ್ತೆ ಹಳ್ಳಿ ರಾಜಕಾರಣ ಗರಿಗೆದರಿರುವುದು ವಿಶೇಷ. ಡಿಸೆಂಬರ್ಗೆ ಗ್ರಾಪಂಗಳ ಅಧಿಕಾರಾವಧಿ ಮುಕ್ತಾಯಗೊಳ್ಳಲಿದೆ. ಇದರ ಮಧ್ಯೆ ಗ್ರಾಪಂ ಅಧ್ಯರ ವಿರುದ್ಧ ಅವಿಶ್ವಾಸ ಗೊತ್ತುವಳಿ ರಾಜಕೀಯ ನಡೆಯುತ್ತಿರುವುದು ವಿಶೇಷ. ಮೊನ್ನೆಯಷ್ಟೇ ಅಕ್ಕೂರು ಗ್ರಾಪಂ ಅಧ್ಯರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಯಾಗಿದ್ದು, ಇದೀಗ, ಸೋಮವಾರ ಮಳೂರು ಗ್ರಾಪಂ ಅಧ್ಯರ ವಿರುದ್ಧ ನಡೆದಿದೆ. ಇವು ಬಾಕಿ ಇರುವ ಮೂರು ತಿಂಗಳ ಅಧಿಕಾರ ಪಡೆಯಲು ನಡೆಯುತ್ತಿರುವ ಸರ್ಕಸ್ ಎಂಬುದರಲ್ಲಿ ಎರಡು ಮಾತಿಲ್ಲ.