ಆನೇಕಲ್​ನಲ್ಲಿ ಬಹು ಸಮಾಜ ಪದ ವತಿಯಿಂದ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಬಿಎಸ್​ಪಿ ರಾಜ್ಯ ಟಕದ ಅಧ್ಯ ಕೃಷ್ಣಮೂರ್ತಿ, ಬಿಎಸ್​ಪಿ ರಾಷ್ಟ್ರೀಯ ಸಂಯೋಜಕ ಅಶೋಕ್​ ಚಕ್ರವರ್ತಿ, ಬಿಎಸ್​ಪಿ ರಾಜ್ಯ ಕಾರ್ಯದರ್ಶಿ ಕೆ.ಸಿ.ನಾಗರಾಜು ಇತರರಿದ್ದರು. 
ಜಿಲ್ಲೆ

ಕೈ-ಕಮಲಕ್ಕಿಲ್ಲ ಜನಪರ ಕಾಳಜಿ

ಆನೇಕಲ್​ : ರಾಜ್ಯ ಕಾಂಗ್ರೆಸ್​ ಜಾತಿ ರಾಜಕೀಯ ಮಾಡುತ್ತಿದೆ. ಬಿಜೆಪಿ ಅಸ್ತಿತ್ವ ಉಳಿಸಿಕೊಳ್ಳಲು ಧರ್ಮ ಧರ್ಮಗಳ ನಡುವೆ ಕಂದಕ ಸೃಷ್ಟಿಸುತ್ತಿದೆ ಎಂದು ಬಿಎಸ್​ಪಿ ರಾಜ್ಯ ಟಕದ ಅಧ್ಯ ಕೃಷ್ಣಮೂರ್ತಿ ದೂರಿದರು. ಪಟ್ಟಣದಲ್ಲಿ ಬಹು ಸಮಾಜ ಪದಿಂದ ಶನಿವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಸಂವಿಧಾನದ ಆಶಯ ಈಡೇರಿಸಲು ಬಿಎಸ್​ಪಿ ಅನಿವಾರ್ಯವಾಗಿದೆ ಎಂದ ಅವರು, ಕೇಂದ್ರದ ಬಿಜೆಪಿ ಸರ್ಕಾರ ಜಿಎಸ್​ಟಿಯನ್ನು ಕಡಿಮೆ ಮಾಡಿರುವುದಾಗಿ ಬೊಬ್ಬೆ ಹೊಡೆಯುತ್ತಿದೆ. ಅಧಿಕಾರಕ್ಕೆ ಬಂದು ಒಂದು ದಶಕದಿಂದ ಜಿಎಸ್​ಟಿ, ತೆರಿಗೆಯ ಹೆಸರಿನಲ್ಲಿ ಬಿಜೆಪಿ ಜನಸಾಮಾನ್ಯರ ರಕ್ತ ಹೀರಿದೆ ಎಂದರು.

ವೈದ್ಯಕಿಯ ಪರಿಕರಗಳು, ಆಹಾರಧಾನ್ಯಗಳ ಮೇಲೆ ಬಿಜೆಪಿ ಜಿಎಸ್​ಟಿ ಹೇರುವ ಮೂಲಕ ಜನರಿಗೆ ತೊಂದರೆ ನೀಡಿತ್ತು. ಜಿಎಸ್​ಟಿ ಹೆಚ್ಚಿಗೆ ಮಾಡಿದ್ದ ಇವರೇ ಈಗ ಕಡಿಮೆ ಮಾಡಿ ಪ್ರಚಾರ ಮಾಡುತ್ತಿದ್ದಾರೆ. ದೇಶದ ಜನರು ತಿರುಗಿ ಬೀಳುವ ಭಯದಿಂದ ಜಿಎಸ್​ಟಿ ಕಡಿಮೆ ಮಾಡಲಾಗಿದೆ ಎಂದರು. ಕೇಂದ್ರ ಸರ್ಕಾರ ಶ್ರೀಮಂತರ ಪರವಾಗಿದೆ. ಶ್ರೀಮಂತರಿಗೆ ಕಡಿಮೆ ತೆರಿಗೆ ವಿಧಿಸುತ್ತಾರೆ. ಬಡವರ ಮೇಲೆ ತೆರಿಗೆಯ ಪ್ರಹಾರ ನಡೆಸುತ್ತಾರೆ. ಕೈಗಾರಿಕೋದ್ಯಮಿಗಳಿಗೆ ಜಾಗ ನೀಡುವ ಕೇಂದ್ರ ಸರ್ಕಾರ ಬಡವರಿಗೆ, ಮನೆ ರಹಿತರಿಗೆ ಜಾಗ ನೀಡಲು ಹಿಂದೇಟು ಹಾಕುತ್ತದೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ 25 ಕೋಟಿ ಜನರು ಬಡತನದಿಂದ ಆಚೆ ಬಂದಿದ್ದಾರೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಆದರೂ ಪ್ರತಿ ನ್ಯಾಯಬೆಲೆಯ ಅಂಗಡಿಗಳ ಮುಂದೆ ಉದ್ದನೆಯ ಸಾಲುಗಳು ಕಂಡು ಬರುತ್ತಿವೆ ಏಕೆ ಎಂದು ಪ್ರಶ್ನಿಸಿದರು.

ನಿರುದ್ಯೋಗ, ಬಡತನ, ಬೆಲೆ ಏರಿಕೆಯಿಂದಾಗಿ ಜನರು ಪರದಾಡುವಂತಾಗಿದೆ. ಟ್ರಂಪ್​ ಗೆಲ್ಲಬೇಕು ಎಂದು ನರೇಂದ್ರ ಮೋದಿ ಹಾಡಿ ಹೊಗಳಿದ್ದರು. ಈಗ ಅಮೆರಿಕ ಭಾರತದ ಮೇಲೆಯೇ ಹೆಚ್ಚು ತೆರಿಗೆ ವಿಧಿಸುತ್ತಿದೆ. ಸೇಡಿನ ರಾಜಕೀಯ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮುಖಂಡರಾದ ಹನುಮಂತರಾಯಪ್ಪ, ದಿನೇಶ್​, ಸಿ.ಕೆ.ರಾಮು, ಶ್ರೀನಿವಾಸ್​, ಜಿಗಣಿ ನಂಜಪ್ಪ, ವಸಂತಣ್ಣ, ಎ.ಸಿ.ಸುರೇಶ್​, ಚಿಕ್ಕಹಾಗಡೆ ಯಲ್ಲಪ್ಪ, ನಾಗರಾಜು, ರಾಜು, ರಾಮಕೃಷ್ಣ, ನಾರಾಯಣಸ್ವಾಮಿ ಇದ್ದರು.

ಒಂದೇ ನಾಣ್ಯದ ಎರಡು ಮುಖ : ಸಂವಿಧಾನದ ಮೇಲೆ ನಂಬಿಕೆಯಿರುವ ಪ ಬಹುಜನ ಸಮಾಜ ಪವಾಗಿದೆ. ಪರಿಶಿಷ್ಟ ಜಾತಿ, ಪಂಗಡಗಳು ಮತ್ತು ಹಿಂದುಳಿದವರನ್ನು ರಾಜಕೀಯ ವ್ಯವಸ್ಥೆಯಲ್ಲಿ ಬಲಪಡಿಸಲು ಬಿಎಸ್​ಪಿ ಅವಶ್ಯವಾಗಿದೆ. ರಾಜ್ಯದಲ್ಲಿ ಬೂತ್​ ಮಟ್ಟದಿಂದ ಪವನ್ನು ಸಂಟಿಸಲು ಕಾರ್ಯಕರ್ತರು ಹೋರಾಟ ನಡೆಸಬೇಕು. ಕೇಂದ್ರದ ಬಿಜೆಪಿ ಮತ್ತು ರಾಜ್ಯದ ಕಾಂಗ್ರೆಸ್​ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಭ್ರಷ್ಟಾಚಾರದಿಂದ ಮುಕ್ತಿ ಪಡೆಯಲು ಬಿಎಸ್​ಪಿ ಅವಶ್ಯಕ ಎಂದು ಬಿಎಸ್​ಪಿ ರಾಜ್ಯ ಉಸ್ತುವಾರಿ ದಿನೇಶ್​ ಗೌತಮ್​ ಹೇಳಿದರು.