ಜಿಲ್ಲೆ

ಯುವಕರ ದಾರಿ ತಪ್ಪಿಸುವ ಜಾಹೀರಾತು ಫಲಕ ಬೇಡ

ಹುಬ್ಬಳ್ಳಿ: ನಗರದ ವಿವಿಧೆಡೆಯ ಗಣೇಶ ಮಂಟಪದ ಕಡೆ ಗುಟ್ಕಾ, ಮದ್ಯಪಾನ ಹಾಗೂ ಧೂಮಪಾನದ ಜಾಹೀರಾತುಗಳ ಫ್ಲೆಕ್ಸ್​ಗಳನ್ನು ಹಾಕಿಸಬಾರದು ಎಂದು ಒತ್ತಾಯಿಸಿ ಶ್ರೀರಾಮ ಸೇನೆ ಕಾರ್ಯಕರ್ತರು, ನಗರದಲ್ಲಿ ಬುಧವಾರ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಗಣಪತಿ ಮಂಟಪದ ಕಡೆ ದೊಡ್ಡ ದೊಡ್ಡ ಜಾಹೀರಾತು ಫಲಕಗಳು ಇವೆ. ಇದರಿಂದ ಯುವಕರು ದಾರಿ ತಪ್ಪುವಂತಾಗಿದೆ. ಕೂಡಲೇ ಈ ಫಲಕಗಳನ್ನು ತೆರವುಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಜಿಲ್ಲಾಧ್ಯಕ್ಷ ಅಣ್ಣಪ್ಪ ದಿವಟಗಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜು ಕಾಟಕರ, ತಾಲೂಕು ಅಧ್ಯಕ್ಷ ಬಸ್ಸು ದುರ್ಗದ, ಪ್ರಮುಖರಾದ ಬಸ್ಸು ಗೌಡರ, ಪ್ರವೀಣ ಮಾಳದಕರ, ಬುಡ್ಡನಗೌಡ ಪಾಟೀಲ, ನಾಗರಾಜ ಹುರಕಡ್ಲಿ, ಇತರರು ಇದ್ದರು.