ಪಾವಗಡ: ಏಷ್ಯಾದಲ್ಲೇ ಅತಿದೊಡ್ಡ ಸೋಲಾರ್ ಪಾರ್ಕ್ (ಶಕ್ತಿಸ್ಥಳ) ತಾಲೂಕಿನ ತಿರುಮಣಿ ಗ್ರಾಮದ ಬಳಿ ತಲೆ ಎತ್ತಿರುವುದು ಹೆಮ್ಮೆಯ ವಿಷಯವಾದರೂ ಬರಪೀಡಿತ ತಾಲೂಕಿಗೆ ಇದರಿಂದ ಯಾವ ಪ್ರಯೋಜನವೂ ಆಗಿಲ್ಲ ಎಂದು ರೈತ ಸಂಗಳು ಆರೋಪಿಸುತ್ತಿವೆ.
ಹೌದು, 2018ರಲ್ಲಿ ಆರರಿಂದ ಎಂಟು ಮಲ್ಟಿ ಮಿಲಿಯನೇರ್ ಕಂಪನಿಗಳಿಗೆ ಕರ್ನಾಟಕ ಸೌರಶಕ್ತಿ ಅಭಿವೃದ್ಧಿ ನಿಗಮ ನಿಯಮಿತದಿಂದ (ಕೆಎಸ್‌ಪಿಡಿಸಿಎಲ್), ತಿರುಮಣಿ ಸುತ್ತಮುತ್ತಲಿನ ಸುಮಾರು 7 ಗ್ರಾಮಗಳ ರೈತರು 11 ಸಾವಿರ ಎಕರೆಗಳನ್ನು ವರ್ಷಕ್ಕೆ 21 ಸಾವಿರ ರೂ.ಗಳಿಗೆ 28 ವರ್ಷಕ್ಕೆ ಗುತ್ತಿಗೆ ನೀಡಿದ್ದರ ಪರಿಣಾಮ ಬೃಹತ್ ಸೋಲಾರ್ ಪಾರ್ಕ್ ತಲೆ ಎತ್ತಿದೆ.
ಒಟ್ಟು 13 ಸಾವಿರ ಎಕರೆಯಲ್ಲಿರುವ ಸೋಲಾರ್ ಪಾರ್ಕ್ ನಿರ್ವಹಣೆಗಾಗಿ 40 ಬ್ಲಾಕ್‌ಗಳನ್ನಾಗಿಸಿ ಟಾಟಾ ಪವರ್ ರಿನೀವೆಬರ್, ೆರ್ಟಂ, ರಿನೀವ್ ಪವರ್, ಅವಾಡ್, ಅದಾನಿ, ಅಮರರಾಜ್, ಸ್‌ಟಾಬ್ಯಾಂಕ್ ಎನರ್ಜಿ ಕಂಪನಿಗಳು ಗುತ್ತಿಗೆ ಪಡೆದುಕೊಂಡಿವೆ. ಈ ಕೇಂದ್ರವು 2050 ಮೆಗಾವಾಟ್ ಸೌರ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೊಂದಿದ್ದು, ಇಲ್ಲಿಂದ ಸೌರಶಕ್ತಿ ಬೆಂಗಳೂರು ಮತ್ತಿತರ ನಗರಗಳ ಕಾರ್ಖಾನೆಗಳಿಗೆ ಸರಬರಾಜಾಗುತ್ತಿದೆ.
ಕಂಪನಿಗಳಿಗೆ ಬರುವ ಲಾಭಾಂಶದಲ್ಲಿ ಶೇ.2 ಸಿಎಸ್‌ಆರ್ ನಿಧಿ ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸಬೇಕೆಂಬ ನಿಯಮ ಇದೆ. ಆದರೆ ಸೋಲಾರ್ ಪಾರ್ಕ್ ಪ್ರಾರಂಭವಾಗಿ 3 ವರ್ಷಗಳಿಂದ ತಿರುಮಣಿಯಲ್ಲಿ ರೀನೀವ್ ಕಂಪನಿ ಕುಡಿಯುವ ನೀರಿನ ಟಕ ಹಾಗೂ ಟಾಟಾ ಕಂಪನಿ ಇಲ್ಲಿನ ಸರ್ಕಾರಿ ಶಾಲೆಯಲ್ಲಿ ಕುಡಿಯುವ ನೀರಿನ ಟಕ ಸ್ಥಾಪಿಸಿರುವುದು ಬಿಟ್ಟರೆ, ಕೋಟ್ಯಂತರ ಆದಾಯ ಇರುವ ಕಂಪನಿಗಳಿಂದ ತಾಲೂಕಿಗೆ ಯಾವ ಉಪಯೋಗ ಆಗಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರಿಗಿಲ್ಲ ಉದ್ಯೋಗ: ಸೋಲಾರ್ ಪಾರ್ಕ್ ನಿರ್ವಾಣ ಆಗುವಾಗ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡುವುದಾಗಿ ತಿಳಿಸಿದ್ದ ನಿಗಮದ ಅಧಿಕಾರಿಗಳು, ಪಕ್ಕದ ಆಂಧ್ರ ಸೇರಿ ಹೊರರಾಜ್ಯಗಳ ಕಾರ್ಮಿಕರಿಗೆ ಹೆಚ್ಚು ಅವಕಾಶ ನೀಡಲಾಗಿದೆ. ಉದ್ಯೋಗ ನೀಡುವುದಾಗಿ ತಾಲೂಕಿನ ಸುವಾರು 600 ಐಟಿಐ ವಿದ್ಯಾರ್ಥಿಗಳಿಗೆ 3 ತಿಂಗಳ ತರಬೇತಿಯನ್ನು ಧಾರವಾಡ ಮತ್ತಿತರ ಕಡೆ ನೀಡಿದ್ದು, 2 ವರ್ಷ ಕಳೆದರೂ ಒಬ್ಬರಿಗೂ ಉದ್ಯೋಗ ನೀಡಿಲ್ಲ.
ಕಂಪನಿಗಳ ಲಾಭಾಂಶದಲ್ಲಿ ಸಿಎಸ್‌ಆರ್ ಹಣ ಖರ್ಚು ವಾಡಲು ಸೋಲಾರ್ ಕಂಪನಿಗಳು ನೋಂದಣಿಯಾಗಿ ಮೂರು ವರ್ಷ ಪೂರ್ತಿಯಾಗಿಲ್ಲ, ಮೂರು ವರ್ಷ ಕಳೆದ ನಂತರ ಈ ಬಗ್ಗೆ ಯೋಚನೆ ವಾಡಬೇಕಾಗುತ್ತದೆ. ಆದರೂ ಇದಕ್ಕೆ ಸಮಿತಿ ಇದ್ದು, ಏನೇ ವಾಡಿದರೂ ಸಮಿತಿಯಲ್ಲಿ ನಿರ್ಣಯ ಕೈಗೊಳ್ಳಬೇಕಾಗುತ್ತದೆ. ನಾಗರಾಜು ವ್ಯವಸ್ಥಾಪಕ ನಿರ್ದೇಶಕ, ಕೆಎಸ್‌ಪಿಡಿಸಿಎಲ್, ಬೆಂಗಳೂರು ಕೋಟ್ಯಂತರ ವ್ಯವಹಾರ ನಡೆಸುವ ಸೋಲಾರ್ ಪಾರ್ಕ್ ಗುತ್ತಿಗೆ ಪಡೆದುಕೊಂಡಿರುವ ಕಂಪನಿಗಳು ಲಾಕ್‌ಡೌನ್ ಸಂದರ್ಭದಲ್ಲಿ ತಾಲೂಕಿನ ಬಡಜನತೆ ಮತ್ತು ರೈತರ ನೆರವಿಗೆ ಬಾರದಿರುವುದು ದುರದೃಷ್ಟಕರ. ಪೂಜಾರಪ್ಪ ಅಧ್ಯಕ್ಷ, ಪಾವಗಡ ತಾಲೂಕು ರೈತ ಸಂಘ ಮತ್ತು ಹಸಿರುಸೇನೆ