ಕಾರವಾರ: ಉತ್ತರ ಕನ್ನಡ ಕೋವಿಡ್ ಹರಡುವಿಕೆಯಲ್ಲಿ ರಾಜ್ಯದಲ್ಲೇ ನಂಬರ್ 1 ಸ್ಥಾನದಲ್ಲಿದೆ. ಆದರೂ ವಿವಿಧೆಡೆ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್ ಲಭ್ಯವಿದೆ. ಆಕ್ಸಿಜನ್ ವ್ಯವಸ್ಥೆಯೂ ಇದೆ. ಬೇಸರದ ಸಂಗತಿ ಎಂದರೆ ವೆಂಟಿಲೇಟರ್ ಹಾಗೂ ಐಸಿಯು ಬೆಡ್ಗಳು ಮಾತ್ರ ಲಭ್ಯವಿಲ್ಲ. ತಾಲೂಕು ಆಸ್ಪತ್ರೆಗಳಲ್ಲಿ ಲಭ್ಯವಿದೆ ಎಂದು ತೋರಿಸುತ್ತಿದ್ದರೂ ಅಲ್ಲಿ ಅದನ್ನು ನಿರ್ವಹಿಸಲು ತಜ್ಞರಿಲ್ಲ.
ಜಿಲ್ಲೆಯಲ್ಲಿ ಸದ್ಯ 7076 ಕೋವಿಡ್ ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ ಹೆಚ್ಚಿನ ಜನರು ಎಂದರೆ 6656 ಜನ ಹೋಂ ಐಸೋಲೇಶನ್ನಲ್ಲಿಯೇ ಇದ್ದಾರೆ. ಇದರಿಂದ ಕೋವಿಡ್ ಬೆಡ್ಗಳು ಲಭ್ಯವಿವೆ. ಜಿಲ್ಲೆಯ ವಿವಿಧ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ ಸೇರಿ 1109 ಬೆಡ್ಗಳು ಕೋವಿಡ್ ರೋಗಿಗಳಿಗಾಗಿ ಮೀಸಲಿದ್ದು, ಅದರಲ್ಲಿ 528 ಮಾತ್ರ ಭರ್ತಿಯಾಗಿವೆ. 581 ಬೆಡ್ಗಳು ಖಾಲಿ ಇವೆ.
ಜಿಲ್ಲೆಯ ಕೋವಿಡ್-10 ಬೆಡ್ ಪರಿಸ್ಥಿತಿ (ಖಾಸಗಿ ಆಸ್ಪತ್ರೆಗಳೂ ಸೇರಿವೆ)
ಸಹಾಯವಾಣಿ: ಜಿಲ್ಲೆಯಲ್ಲಿ ಕೋವಿಡ್ ರೋಗಿಗಳಿಗಾಗಿ ಲಭ್ಯವಿರುವ ಬಡ್ಗಳ ಮಾಹಿತಿ ಪಡೆಯಲು ಜಿಲ್ಲಾಡಳಿತದ ವೆಬ್ಸೈಟ್ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಡಳಿತದ ವೆಬ್ಸೈಟ್ನಲ್ಲಿ ಅದಕ್ಕಾಗಿ ಡ್ಯಾಷ್ ಬೋರ್ಡ್ ಇದೆ. ಅಷ್ಟೇ ಅಲ್ಲದೆ, ಜಿಲ್ಲಾಡಳಿತದ ಕೋವಿಡ್ ಸಹಾಯವಾಣಿ 1077 ಗೂ ಸಂಪರ್ಕ ಮಾಡಿ ಬೆಡ್ ಮಾಹಿತಿ ಪಡೆಯಬಹುದು.
ಸಾಮಾನ್ಯ ಬೆಡ್ ಮಾತ್ರ ಲಭ್ಯ: ಕ್ರಿಮ್ಸನಲ್ಲಿ ಸಾಮಾನ್ಯ 93, ವಿಶೇಷ ಆಮ್ಲಜನಕ ವ್ಯವಸ್ಥೆ (ಎಚ್ಎಫ್ಎನ್ಸಿ) 11 ಬೆಡ್ಗಳು ಲಭ್ಯವಿವೆ. ವೆಂಟಿಲೇರ್ ಹಾಗೂ ಆಮ್ಲಜನಕ ಬೆಡ್ಗಳು ಲಭ್ಯವಿಲ್ಲ.