ಜಿಲ್ಲೆ

ರಾಜಧಾನಿಯಲ್ಲಿ ಒಂದು ವಾರ ಮದ್ಯ ಸಿಗಲ್ಲ

ಹರೀಶ್​​ ಕೆ.ಸಿ.

ಬೆಂಗಳೂರು: ಲೋಕಸಭಾ ಹಾಗೂ ವಿಧಾನ ಪರಿಷತ್ತು ಚುನಾವಣೆಯ ಫಲಿತಾಂಶ ಹೊರ ಬೀಳುವ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಒಂದು ವಾರ ಕಾಲ ಮದ್ಯ ಸಿಗಲ್ಲ. ಹೀಗಾಗಿ, ಮದ್ಯವ್ಯಸನಿಗಳು ಎಣ್ಣೆ ಖರೀದಿಸಲು ಮದ್ಯದಂಗಡಿಗಳಿಗೆ ಮುಗಿ ಬಿದ್ದಿದ್ದಾರೆ.

ಜೂ 3ರಂದು ಪದವೀಧರ ಕ್ಷೇತ್ರ ಚುನಾವಣೆಗೆ ಮತದಾನ ನಡೆಯುವ ಹಿನ್ನೆಲೆಯಲ್ಲಿ ಜೂ 1ರ ಸಂಜೆ 4 ಗಂಟೆಯಿಂದ ಜೂ 6ರವರೆಗೆ ಮದ್ಯದಂಗಡಿಗಳು ಬಂದ್​ ಹಾಕಲಿವೆ. ಜೂ 4ರಂದು ದೇಶಾದ್ಯಂತ ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. ಹಾಗಾಗಿ, ಅಂದು ಸಹ ಬಾರ್​ಗಳು ತೆರೆಯುವುದಿಲ್ಲ. ಜೂ 6ರಂದು ವಿಧಾನ ಪರಿಷತ್ತಿನ ಚುನಾವಣೆಯ ಮತ ಎಣಿಕೆ ಇದೆ. ಹೀಗಾಗಿ, ಒಂದು ವಾರ ಕಾಲ ಮದ್ಯದಂಗಡಿ ಬಾಗಿಲು ಹಾಕುವ ಹಿನ್ನೆಲೆಯಲ್ಲಿ ಈಗಿಂದಲ್ಲೇ ಎಣ್ಣೆ ಖರೀದಿಸಿ ಸಂಗ್ರಹಿಸಿ ಇಟ್ಟುಕೊಳ್ಳಲು ಮದ್ಯ ವ್ಯಸನಿಗಳು ಮುಂದಾಗಿರುವುದು ಕಂಡುಬಂದಿದೆ.