ಅಥಣಿ: ಇನ್ನರ್‌ವ್ಹೀಲ್ ಕ್ಲಬ್‌ನ ರಜತ ಮಹೋತ್ಸವ ಸ್ಥಳೀಯ ಶಿವಣಗಿ ಸಾಂಸ್ಕೃತಿಕ ಭವನದಲ್ಲಿ ೆ.8ರಂದು ಮಧ್ಯಾಹ್ನ 3 ಗಂಟೆಗೆ ಉದ್ಘಾಟನೆಗೊಳ್ಳಲಿದೆ.
ಹಾಸ್ಯ ಕಲಾವಿದ ಮೈಸೂರಿನ ಪ್ರೊ.ಕೃಷ್ಣೆಗೌಡರಿಂದ ಹಾಸ್ಯೋತ್ಸವ, ಸತ್ಕಾರ ಸಮಾರಂಭ ಜರುಗಲಿದೆ ಎಂದು ಇನ್ನರ್‌ವ್ಹೀಲ್ ಕ್ಲಬ್ ಸಂಸ್ಥಾಪಕ ಅಧ್ಯಕ್ಷೆ ಪೂರ್ಣಿಮಾ ಪಾಂಗಿ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಬಿಗ್‌ಬಾಸ್ ಸ್ಪರ್ಧಿ ಗೋಲ್ಡ ಸುರೇಶ ಆಗಮಿಸುವರು.
ರೈತ ಮಹಿಳೆ ಕವಿತಾ ಮಿಶ್ರಾ, ಮುಂಬೈ ಎಸಿಪಿ ಶಬಾನಾ ಶೇಖ್ ಅವರನ್ನು ಸತ್ಕರಿಸಲಾಗುವುದು. ಮಾತನಾಡುವ ಗೊಂಬೆ ಹಾಗೂ ಮ್ಯಾಜಿಕ್ ಶೋ ಆಯೋಜಿಸಲಾಗಿದೆ. ರೋಟರಿ ಕ್ಲಬ್ ಅಧ್ಯಕ್ಷ ಅರುಣ ಸೌದಾಗರ, ಉದ್ಯಮಿ ರಾವಸಾಹೇಬ ಐಹೊಳೆ ಪಾಲ್ಗೊಳ್ಳಲಿದ್ದಾರೆ ಎಂದರು.
ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ತೃಪ್ತಿ ಕುಲಕರ್ಣಿ ಮಾತನಾಡಿ, ಇನ್ನರ್‌ವ್ಹೀಲ್ ಕ್ಲಬ್ ರಜತ ಮಹೋತ್ಸವ ಅಂಗವಾಗಿ ಒಂದು ವರ್ಷದ ಅವಧಿಯಲ್ಲಿ 25ಕ್ಕೂ ಹೆಚ್ಚು ರಚನಾತ್ಮಕ, ಸಾಮಾಜಿಕ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಇನ್ನರವ್ಹೀಲ್ ಕ್ಲಬ್ ಸದಸ್ಯರಾದ ಮಧುಶ್ರೀ ಮಂಗಸೂಳಿ, ಲಲಿತಾ ಮೆಕನಮರಡಿ, ಪ್ರಿಯಾ ಚಿಮ್ಮಡ, ಜಯಶ್ರೀ ಪೂಜಾರಿ, ವೈಶಾಲಿ ಮಠಪತಿ, ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ, ಅಧ್ಯಕ್ಷ ಅರುಣ ಸೌದಾಗರ, ಅನಿಲ ದೇಶಪಾಂಡೆ, ಶೇಖರ ಕೋಲಾರ, ಸಚಿನ ದೇಸಾಯಿ, ಬಾಹುಬಲಿ ಅಸ್ಕಿ, ಅಮೃತ ಕುಲಕರ್ಣಿ ಇತರರಿದ್ದರು.