Oplus_16908288 
ಜಿಲ್ಲೆ

ಕ್ರೀಡಾಭಿಮಾನ ಹೆಚ್ಚಾಗಲು ಪ್ರೇರೇಪಿಸಿ

ಎ. ಆರ್. ರಘುರಾಮ

ನಂಜನಗೂಡು : ಸೋಲು, ಗೆಲುವು ಎನ್ನುವುದಕ್ಕಿಂತ ಮಕ್ಕಳಲ್ಲಿ ಕ್ರೀಡಾಭಿಮಾನ ಹೆಚ್ಚಾಗಲು ಪ್ರೇರೇಪಿಸಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ಸಲಹೆ ನೀಡಿದರು. ನಗರದ ತಾಲೂಕು ಕ್ರೀಡಾಂಗಣದಲ್ಲಿ ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ದೈಹಿಕ ಶಿಕ್ಷಣ ವಿಭಾಗ, ಶಾಲಾ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ 14 ವರ್ಷಗಳ ಒಳಗಿನ ಮಕ್ಕಳಿಗೆ ಹಮ್ಮಿಕೊಂಡಿದ್ದ ಕಸಬಾ ಹೋಬಳಿ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಕ್ರೀಡಾ ಚಟುವಟಿಕೆಗಳಲ್ಲಿ ಮಕ್ಕಳು ಹೆಚ್ಚಾಗಿ ಭಾಗವಹಿಸಬೇಕು. ಶಿಕ್ಷಕರು ಮತ್ತು ಮಕ್ಕಳುಕ್ರೀಡಾಂಗಣದಲ್ಲೂ ಸಮಯ ಸದುಪಯೋಗ ಮಾಡಿಕೊಳ್ಳಬೇಕು. ಸರಿಯಾದ ರೀತಿಯಲ್ಲಿ ಪ್ರೋತ್ಸಾಹ ನೀಡಿದರೆ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರತಿಭೆಗಳು ನಮ್ಮ ಶಾಲೆಗಳಿಂದಲೇ ಹೊರ ಬರಲಿದ್ದಾರೆ ಎಂದರು. ಜುಬಿಲೆಂಟ್ ಫೌಂಡೇಶನ್ ಸಂಸ್ಥೆಯವರು ಪ್ರತಿ ವರ್ಷ ವಿಜೇತ ಮಕ್ಕಳಿಗೆ ಬಹುಮಾನಗಳನ್ನು ನೀಡಿ ಬೆಂಬಲಿಸುತ್ತಿರುವುದು ಶ್ಲಾಘನೀಯ ಎಂದರು.

ಶಿಕ್ಷಕರ ಸಂಘದ ಅಧ್ಯಕ್ಷ ಧರ್ಮ ರತ್ನಾಕರ, ಉದ್ಯಮಿಗಳಾದ ಗೋವರ್ಧನ,

ಪ್ರದೀಪ್, ದೀಪಕ್, ರಂಗನಾಥನ್, ಹನುಮಂತ ರಾಜು, ಸೌಮೇಶ್, ಚೆಲುವರಾಜು, ರಾಜು, ರವಿಕುಮಾರ್, ರೇಚಣ್ಣ, ಸುಮಾ ಇತರರು ಹಾಜರಿದ್ದರು.