ಜಿಲ್ಲೆ

ನಿತ್ಯಾ ಕುಮಾರಿ ಪ್ರಾಮಾಣಿಕತೆ

ಸುನಿಲ್ ಪೊನ್ನೇಟಿ

ಮಡಿಕೇರಿ:

ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಹಿನೂರ್ ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್ ಎದುರಿನ ಆಟೋ ನಿಲ್ದಾಣ ಸಮೀಪ ಗುರುವಾರ ಬಿದ್ದುಸಿಕ್ಕಿದ ಚಿನ್ನದ ಸರವನ್ನು ಪೊಲೀಸರಿಗೆ ಕೊಡುವ ಮೂಲಕ ತಾಳತ್‌ಮನೆ ನಿವಾಸಿ ಪಿ. ನಿತ್ಯಾ ಕುಮಾರಿ ಪ್ರಾಮಾಣಿಕತೆ ಮೆರೆದಿದ್ದಾರೆ.

ನಿತ್ಯಾ ಅವರು ತಮಗೆ ಸಿಕ್ಕಿದ ಚಿನ್ನದ ಸರವನ್ನು ಪೊಲೀಸ್ ಕಂಟ್ರೋಲ್ ರೂಮ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಎಸ್‌ಐ ಎಂ.ಕೆ ದಿಲೀಪ್ ಕುಮಾರ್ ಅವರಿಗೆ ಹಸ್ತಾಂತರಿಸಿದ್ದಾರೆ.

ಇವರ ಈ ಕಾರ್ಯವನ್ನು ಅಭಿನಂದಿಸಿರುವ ಎಸ್‌ಪಿ ಕೆ. ರಾಮರಾಜನ್ ಚಿನ್ನದ ಸರ ಕಳೆದುಕೊಂಡ ವಾರಸುದಾರರು ತಮ್ಮನ್ನು ಸಂಪರ್ಕಿಸಿ ಸೂಕ್ತ ಮಾಹಿತಿ ಹಾಗೂ ದಾಖಲೆಗಳನ್ನು ನೀಡಿ ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ.