ಜಿಲ್ಲೆ

ನಿಟ್ಟೂರು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ

ಗೋಪಾಲಕೃಷ್ಣ ಪಾದೂರ್

ಉಡುಪಿ: ನಿಟ್ಟೂರು ಪ್ರೌಢಶಾಲೆಯ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಪಿ.ಎಲ್​. ಅಣ್ಣಾಜಿ ರಾವ್​ ಸ್ಮಾರಣಾರ್ಥ ಪಿ.ಎಲ್​.ಎನ್​. ರಾವ್​ ಪ್ರಾಯೋಜಕತ್ವದಲ್ಲಿ 30 ವಿದ್ಯಾರ್ಥಿಗಳಿಗೆ 36000 ರೂ. ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಗುರುವಾರ ಶಾಲಾ ಸಭಾಂಗಣದಲ್ಲಿ ಜರಗಿತು.
ನಿಟ್ಟೂರು ಎಜುಕೇಶನಲ್​ ಸೊಸೈಟಿಯ ಕಾರ್ಯದರ್ಶಿ ಮುರಲಿ ಕಡೆಕಾರ್​ ಮಾತನಾಡಿ, ಹೆತ್ತವರು ತಮ್ಮ ಮಕ್ಕಳ ಉತ್ತಮ ಕಲಿಕೆಗಾಗಿ ಸಮಯವನ್ನು ಮೀಸಲಿಡುವುದರೊಂದಿಗೆ ಶಿಕ್ಷಕರು ಮತ್ತು ಶಾಲೆಯೊಂದಿಗೆ ನಿರಂತರ ಸಂಪರ್ಕ ಹೊಂದಿರಬೇಕು ಎಂದರು.

ಶಾಲೆಯ ಹಳೆವಿದ್ಯಾರ್ಥಿ ಕೃಷ್ಣಮೂರ್ತಿ ಭಟ್​ ಪೂತ್ತೂರು ವಿದ್ಯಾರ್ಥಿವೇತನವನ್ನು ವಿತರಿಸಿದರು. ನಿವೃತ್ತ ಅಧ್ಯಾಪಕ ಎಚ್​.ಎನ್​. ಶೃಂಗೇಶ್ವರ ಪಿ.ಎಲ್​. ಅಣ್ಣಾಜಿ ರಾವ್​ ದತ್ತಿನಿಧಿಯ ಕುರಿತು ಮಾತನಾಡಿದರು. ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಕಮಲಾಕ್ಷ ಶೇಟ್​, ಹಿಂದುಳಿದ ವರ್ಗಗಳ ವಸತಿನಿಲಯದ ಮೇಲ್ಚಿಚಾರಕ ಮಂಜುನಾಥ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯಿನಿ ಅನಸೂಯ ಸ್ವಾಗತಿಸಿದರು. ಶಿಕ್ಷಕ ದೇವದಾಸ್​ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ನಮಿತಾಶ್ರೀ ವಂದಿಸಿದರು.